ಕೊಯನಾಡು ಸೆ.30 : ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿ, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್, ಗಲ್ಫ್ ಸಮಿತಿ ಸಂಯುಕ್ತ ಆಶ್ರಯದಲ್ಲಿ ಈದ್ ಮಿಲಾದ್ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಸುಬುಲು ಸ್ಸಲಾಂ ಮದ್ರಸ ಸಭಾಂಗಣದಲ್ಲಿ ಜಮಾಅತ್ ಅಧ್ಯಕ್ಷ ಎಸ್.ಎ.ಅಬ್ದುಲ್ ರಜಾಕ್ ದ್ವಜರೋಹಣ ಮೂಲಕ ಮಿಲಾದ್ ಸಮಾವೇಶಕ್ಕೆ ಚಾಲನೆ ನೀಡಿದರು,.
ನಂತರ ಸ್ವಲಾತ್ ಜಾಥಾ ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಜಿಲ್ಲಾ ವಕ್ಫ್ ಸದಸ್ಯರಾದ ಹಾಜಿ ಎಸ್ ಮೊಯ್ದೀನ್ ಕುಂಞ ಉದ್ಘಾಟಿಸಿದರು.
ಕೊಯನಾಡಿನಿಂದ ಚೆಡಾವು ವರೆಗೆ ಸಾಗಿ ಬಂದ ಜಾಥಾದಲ್ಲಿ ಮದ್ರಸ ವಿದ್ಯಾರ್ಥಿಗಳ ಆಕರ್ಷಣಿಯ ಧಫ್ ಪ್ರದರ್ಶನ, ಊರಿನ ಯುವಕರ ವಿವಿಧ ಶೈಲಿಯ ಘೋಷವಾಕ್ಯ, ಪ್ರವಾದಿ ಸಂದೇಶವನ್ನು ಜಾಥದ ಮೂಲಕ ಸಾರಿದರು. ನಂತರ ಮಸೀದಿಯಲ್ಲಿ ಬೃಹತ್ ಮೌಲೀದ್ ಪಾರಾಯಣ ನಡೆಯಿತು. ಮಗ್ರಿಬ್ ನಮಾಜಿನ ಬಳಿಕ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಮಸೀದಿ ಅಧ್ಯಕ್ಷ ಎಸ್.ಎ.ಅಬ್ದುಲ್ ರಜಾಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಸೀದಿ ಖತೀಬರಾದ ಅಬ್ದುಲ್ ಹಮೀದ್ ಅಮ್ಜದಿ ಉದ್ಘಾಟಿಸಿದರು.
ಉಸ್ತಾದ್ ಹಂಜ ಸಅದಿ ಸ್ವಾಗತಿಸಿ ನಿರೂಪಣೆ ಮಾಡಿದರು, ಅಬ್ದುಲ್ ಜಲೀಲ್ ಸಖಾಫಿ ಮಿಲಾದ್ ಶುಭ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಸಮಿತಿ ಸದಸ್ಯರು, ನುಸ್ರತುಲ್ ಇಸ್ಲಾಂ ಸದಸ್ಯರು, ಗಲ್ಪ್ ಸಮಿತಿ, ಸದಸ್ಯರು ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು. ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.