ಮಡಿಕೇರಿ ಅ.12 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಹುದಿಕೇರಿ ಪಟ್ಟಣ, ಅಂಜಿಗೇರಿ ನಾಡ್ -ಮಡಕೋಡ್ ನಾಡ್ ಮಂದ್ ನಲ್ಲಿ ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಪಾದಯಾತ್ರೆ ನಡೆಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕೊಡವ ಲ್ಯಾಂಡ್ ಹಕ್ಕೊತ್ತಾಯದ ಕುರಿತು ವಿವರಿಸಿದರು.
ನಾಡ್ ತಕ್ಕರುಗಳಾದ ಚಕ್ಕೇರ ರಾಜೇಶ್, ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಹಿರಿಯರಾದ ಚಕ್ಕೇರ ಕಾಶಿ, ಊರು ತಕ್ಕರಾದ ಬೊಳ್ಳಜಿರ ಮಣಿ, ಪ್ರಮುಖರಾದ ಕಳ್ಳಂಗಡ ಗಣೇಶ್, ಕಿರಿಯಮಾಡ ರಾಯ್ ಕುಶಾಲಪ್ಪ, ಕಿರಿಯಮಾಡ ಸೋನಪ್ಪ, ಚೆಕ್ಕೇರ ಚಂದ್ರಪ್ರಕಾಶ್, ಹೊಟ್ಟೆಂಗಡ ಬಿದ್ದಪ್ಪ, ಬೊಳ್ಳಜಿರ ಜೋಯಪ್ಪ, ಬೊಳ್ಳಜಿರ ಮಹೇಶ್, ಲೋಕನಾಥ್, ಬಿ.ಟಿ.ಅಯ್ಯಪ್ಪ, ಚೆಕ್ಕೇರ ಬೋಪಣ್ಣ, ಕಿರಿಯಮಾಡ ಮಿಲನ್ ಗಣಪತಿ, ನೂರೆರ ಮಾಚಯ್ಯ, ಮಂಡಂಗಡ ಮೋಹನ್, ಬೊಜ್ಜಂಗಡ ತಿಮ್ಮಯ್ಯ, ಬಲ್ಯಮಿದೇರಿರ ಪ್ರಕಾಶ್, ಚಂಗುಲಂಡ ಸೂರಜ್, ಚೆಕ್ಕೇರ ರಂಜಿತ್, ಬಯೊವಂಡ ಕಿಶೋರ್ ಕಾರ್ಯಪ್ಪ, ಅಯ್ಯನೆರವಂಡ ಪ್ರಥ್ವಿ ಪೂವಣ್ಣ, ಮಂಡಂಗಡ ಅಶೋಕ್, ಬೊಟ್ಟಂಗಡ ಪೊನ್ನಪ್ಪ, ಪಟ್ಟಮಾಡ ಲಲಿತ, ಬೊಜ್ಜಂಗಡ ಕರುಂಬಯ್ಯ, ಮಂಡಂಗಡ ಭೀಮಯ್ಯ, ಚೊಟ್ಟೆಯಂಡ ಕಾರ್ಯಪ್ಪ, ಕಿರಿಯಮಾಡ ಗಣೇಶ್, ಕಿರಿಯಮಾಡ ಈಶ ಮಂದಣ್ಣ ಮತ್ತಿತರರು ಪಾದಯಾತ್ರೆ ಹಾಗೂ ಕೊಡವ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡಿದ್ದರು.












