ಮಡಿಕೇರಿ ಅ.12 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಟಿ.ಶೆಟ್ಟಿಗೇರಿಯ ತಾಳೇರಿ ನಾಡ್ ಮಂದ್ ನಲ್ಲಿ ಕೊಡವ ಲ್ಯಾಂಡ್ ಹಕ್ಕೊತ್ತಾಯದ ಪಾದಯಾತ್ರೆ ಮತ್ತು ಕೊಡವ ಜಾಗೃತಿ ಸಭೆ ನಡೆಯಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ “ಪೆರುಮಾಳ್” ಪಟ್ಟಿ ನಾಡ್ ಮಂದ್ ನಿಂದ ಟಿ.ಶೆಟ್ಟಿಗೇರಿ ಪಟ್ಟಣದಲ್ಲಿ ಪಾದಯಾತ್ರೆ ಸಾಗಿತು. ಕೊಡವ, ಕೊಡವತಿಯರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಪಾಲ್ಗೊಂಡು ಮಾನವ ಸರಪಳಿ ನಿರ್ಮಿಸಿದರು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ನಾಚಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಳೇರಿ ಮೂಂದ್‌ನಾಡ್ ತಕ್ಕ ಕೈಬುಲಿರ ಹರೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಬೊಳ್ಳಜಿರ ಸುಶೀಲ, ಕೈಬುಲಿರ ಪಾರ್ವತಿ ಅಪ್ಪಯ್ಯ, ಅಜ್ಜಮಾಡ ಸಾವಿತ್ರಿ, ತೀತಿರ ಅನಿತಾ, ಕೈಬುಲಿರ ಪಾರ್ವತಿ, ಮಚ್ಚಮಾಡ ಹೇಮ ನಾಣಯ್ಯ, ಕಳ್ಳಿಚಂಡ ದೇವಿಕ ನಂಜಪ್ಪ, ಮಚ್ಚಮಾಡ ಸವಿ ನಾಣಯ್ಯ, ತಡಿಯಂಗಡ ಗಾನ ಸೋಮಣ್ಣ, ಮುಕ್ಕಾಟಿರ ಅಂಜನ ಪೊನ್ನಣ್ಣ, ಮುಕ್ಕಾಟಿರ ಮಿನಿತ ಸಂದೀಪ್, ಬಾಚಿರ ನಿಶಾ ಪ್ರದೀಪ್, ಬಾಚಿರ ಶೈಲಾ, ಚಟ್ಟಂಗಡ ರಮ್ಯ ಕರುಂಬಯ್ಯ, ತಡಿಯಂಗಡ ಸ್ವರೂಪ್ ದೇವಯ್ಯ, ಕಳ್ಳಿಚಂಡ ದೀನ ಉತ್ತಪ್ಪ, ಚಂಗುಲಂಡ ಅಶ್ವಿನಿ ಸತೀಶ್, ತೀತಿರ ಲೀನಾ ಸತೀಶ್, ಮಂದಮಾಡ ಗೀತಾ ತೇಜಪ್ಪ, ಮದ್ರಿರ ತೆಮಿನಾ ಇಂದ್ರ, ಮುಕ್ಕಾಟಿರ ಲೀಲಾ ವೇಣು, ಕರ್ಣಂಡ ರೂಪ ದೇವಯ್ಯ, ಕುಪ್ಪಂಡ ಉಷಾ ಮುದ್ದಪ್ಪ, ಬಾಚರಣಿಯಂಡ ಚಿಪ್ಪಣ್ಣ, ಕಾಂಡೇರ ಸುರೇಶ್, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಅಜ್ಜಮಾಡ ಚಿಮ್ಮ, ಮಚ್ಚಮಾಡ ಸುಮಂತ್, ಚಟ್ಟಂಗಡ ರವಿ ಸುಬ್ಬಯ್ಯ, ತೀತಿರ ಪ್ರಭು ಸುಬ್ಬಯ್ಯ, ತೀತಿರ ಕಾಶಿ ಪೂಣಚ್ಚ, ಅಪ್ಪಚಂಗಡ ಮೋಟಯ್ಯ, ಚಟ್ಟಂಗಡ ಸಜಾ ಸೋಮಣ್ಣ, ಬಾದುಮಂಡ ಲವ, ಚಟ್ಟಂಗಡ ಕಿಶೋರ್ ಕಾಳಪ್ಪ, ಚೊಟ್ಟೆಯಂಡ್ ಮಾಡ ಪ್ರಜಾ ಮುದ್ದಯ್ಯ, ಕಟ್ಟೇರ ಈಶ್ವರ, ಬೊಟ್ಟೆಯಂಡ್ ಮಾಡ ಉದಯ, ಎ.ಎಸ್.ತಮ್ಮಯ್ಯ, ಮಂದಮಾಡ ತೇಜಪ್ಪ, ಅಲೆಮಾಡ ಬಿದ್ದಪ್ಪ, ಬಿ.ಎಂ.ಪೊನ್ನಪ್ಪ, ಚೊಟ್ಟೆಯಂಡ್ ಮಾಡ ಧಂನಂಜಯ, ಮಚ್ಚಮಾಡ ನಂದ, ಅಂಡಮಾಡ ಸತೀಶ್, ಕೊಟ್ರಮಾಡ ಸುಮಂತ್, ಕೈಬುಲಿರ ಸುರೇಶ್, ಬಾದ್‌ಮಂಡ ಕಟ್ಟಿ, ಬೊಳ್ಳೆರ ಪೊನ್ನಪ್ಪ, ಅಪ್ಪೆಯಂಗಡ ಮಾಲೆ, ಪಾರ್ವಂಗಡ ನವೀನ್, ಜಮ್ಮಡ ಮೋಹನ್, ಕಿರಿಯಮಾಡ ಶರೀನ್, ಚೆಟ್ಟಂಗಡ ಸೋಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.











