ಚೆಟ್ಟಳ್ಳಿ ಅ.12 : ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ದಾಖಲೆಯ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಪೇರಿಯನ ಪೂಣಚ್ಚ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಸುಂಟಿಕೊಪ್ಪ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲೋಕೇಶ್, ಉಪಚುನಾವಣಾಧಿಕಾರಿಯಾಗಿ ಚೆಟ್ಟಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ್ ಎನ್.ಎಸ್ ಕಾರ್ಯನಿರ್ವಹಿಸಿದರು.
ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಬಲ್ಲಾರಂಡ ಮಣಿ ಉತ್ತಪ್ಪ ಅವರ ಬಳಗ ಭರ್ಜರಿ ಗೆಲವು ಸಾಧಿಸಿತ್ತು. ಎಲ್ಲಾ 12 ಸ್ಥಾನಗಳಲ್ಲಿ ಮಣಿ ಉತ್ತಪ್ಪ ಅವರ ಬೆಂಬಲಿಗರು ಗೆಲುವು ಸಾಧಿಸಿದ್ದರು.
ಕಳೆದ ಮೂರು ಅವಧಿಯೂ ಮಣಿ ಉತ್ತಪ್ಪ ಅವರೇ ಅಧ್ಯಕ್ಷರಾಗಿ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ನೂತನ ಕಟ್ಟಡ, ನರೇಂದ್ರಮೋದಿ ಸಹಕಾರ ಭವನ, ಕಾಫಿ ಗುಣಮಟ್ಟ ಪರೀಕ್ಷಾ ಕೇಂದ್ರ, ಮಣ್ಣು ಪರೀಕ್ಷಾ ಘಟಕ, ಕುಡಿಯುವ ನೀರಿನ ಘಟಕ, ಈರಳೆ ಶಾಖೆಯ ಅಭಿವೃದ್ಧಿ ಸೇರಿದಂತೆ ಹಲವು ಲಾಭದಾಯಕ ವ್ಯವಹಾರ ನಡೆಸುವ ಮೂಲಕ ಸಂಘ ರಾಜ್ಯದಲ್ಲಿಯೇ ಮಾದರಿ ಎನಿಸಿಕೊಂಡಿದೆ.

ಮಾಜಿ ಉಪಾಧ್ಯಕ್ಷರುಗಳಾದ ಕಣಜಾಲು ಪೂವಯ್ಯ, ಹೆಚ್ .ಎಸ್ ತಿಮ್ಮಪ್ಪಯ್ಯ, ಮಾಜಿ ನಿರ್ದೇಶಕಿ ಪುತ್ತರಿರ ಸೀತಮ್ಮ ಮೊಣ್ಣಪ್ಪ ಅವರು ಬಲ್ಲಾರಂಡ ಮಣಿಉತ್ತಪ್ಪ ಅವರ ಸೇವೆಯನ್ನು ಸ್ಮರಿಸಿದರು. ಮಾಜಿನಿರ್ದೇಶಕರುಗಳಾದ ನೂಜಿಬೈಲು ನಾಣಯ್ಯ, ಮರದಾಳು ಉಲ್ಲಾಸ, ಧನಂಜಯ, ಬಟ್ಟೀರ ಅಪ್ಪಣ್ಣ, ಶಾಂತಪ್ಪ, ಅಡಿಕೇರ ಜಯಮುತ್ತಪ್ಪ, ಚೆಟ್ಟಳ್ಳಿ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ಬಲ್ಲಾರಂಡ ಕಂಠಿಕಾರ್ಯಪ್ಪ, ಸಹಪ್ರಮುಖ್ ರವಿ ಎನ್.ಎಸ್, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ .ಕೆ.ಎಸ್.ಸ್ವಾಗಿತಿಸಿ ವಂದಿಸಿದರು.