ಮಡಿಕೇರಿ ಅ.13 : ಮಾದಾಪುರದ ಶ್ರೀ ಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ 2023-2024 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ದೊರೆಯಿತು.
ಶಿಬಿರವನ್ನು ಹರದೂರು ಗ್ರಾ.ಪಂ ಅಧ್ಯಕ್ಷೆ ಉಷಾ ಪೊನ್ನಪ್ಪ ಉದ್ಘಾಟಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಹರ್ಷ ಮಾತನಾಡಿ ಎನ್ ಎಸ್ ಎಸ್ ನಿಂದ ಸ್ವಯಂ ಶಿಸ್ತು ಸಮಯ ಪ್ರಜ್ಞೆ, ಸಮಾಜ ಸೇವೆ, ರಾಷ್ಟ್ರೀಯ ಭಾವೈಕ್ಯತೆ ರೂಡಿಸಿಕೊಳ್ಳ ಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಸಿ.ಜಿ. ಮಂದಪ್ಪ, ಕಾರ್ಯಕ್ರಮಾಧಿಕಾರಿ ಎನ್.ಎನ್. ಮನೋಹರ್ ಸಂಸ್ಥೆಯ ಬೋಧಕ ಬೋಧಕೇತರ ವರ್ಗ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.








