ಮಡಿಕೇರಿ ಅ.13 : ಸಿದ್ದಾಪುರದ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ಅ.15 ರಿಂದ ಅ.24ರ ವರೆಗೆ ನವರಾತ್ರಿ ಮಹೋತ್ಸವ ಜರುಗಲಿದೆ.
ದೇವಾಲಯದಲ್ಲಿ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ಅಲಂಕಾರ ಪೂಜೆ, ಪ್ರಸಾದ ವಿತರಣೆ ಹಾಗೂ ಸಂಜೆ 6.30 ಗಂಟೆಗೆ ಅಲಂಕಾರ ದೀಪಾರಾಧನೆ, ಭಗವತಿ ಸೇವೆ, ಕುಮಾರಿ ಪೂಜೆ, ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ ನೆರವೇರಲಿದೆ.
ಅ.22ರ ದುರ್ಗಾಷ್ಠಮಿಯಂದು ಸಂಜೆ ಪುಸ್ತಕ ಪೂಜೆಗಿಡುವುದು, 23 ರಂದು ಮಹಾನವಮಿ (ಆಯುದ್ಧ ಪೂಜೆ) ಪ್ರಯುಕ್ತ 8.30 ಗಂಟೆಗೆಯಿಂದ ವಾಹನ ಪೂಜೆ ಜರುಗಲಿದ್ದು, ಅ.24 ರಂದು ವಿಜಯದಶಮಿಯಂದು ವಿದ್ಯಾರಂಭ, 9 ಗಂಟೆಯಿಂದ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ವಿದ್ಯಾರಂಭಕ್ಕೆ ಬರುವ ಮಕ್ಕಳು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.









