ಮಡಿಕೇರಿ ಅ.21 : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅ.22 ರಂದು ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿತವಾಗಿದೆ.
ಬೆಳಗ್ಗೆ 9.30 ಗಂಟೆಯಿಂದಲೇ ವಿವಿಧ ಸ್ಪಧೆಗಳನ್ನು ಮಹಿಳೆಯರಿಗೆ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ತಿಳಿಸಿದ್ದಾರೆ.
8ನೇ ವಷ೯ದ ಮಹಿಳಾ ದಸರಾ ಅಂಗವಾಗಿ ಎಥ್ ನಿಕ್ ಫ್ಯಾಷನ್ ಶೋ , ಸಾಂಪ್ರದಾಯಿಕ ಉಡುಗೆ ಸ್ಪಧೆ೯, ಗಾರ್ಭಾ ನೃತ್ಯ ಸ್ಪಧೆ೯, 100 ಮೀಟರ್ ಓಟದ ಸ್ಪರ್ಧೆ , ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ , ಹಗ್ಗ ಜಗ್ಗಾಟ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯುವುದು., ಬಕೆಟ್ ಗೆ ಚೆಂಡನ್ನು ಹಾಕುವುದು, ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು, ನಿಧಾನವಾಗಿ ನಡೆಯುವುದು. ಸೂಜಿಗೆ ನೂಲನ್ನು ಹಾಕುವುದು. ಬಾಂಬ್ ಇನ್ ಸಿಟಿ, ಚೆಂಡನ್ನು ವರ್ಗಾಯಿಸುವುದು, ನಿಧಾನವಾಗಿ ನಡೆಯುವುದು, ಮೆಹಂದಿ ಹಾಕುವುದು, ಸೀರೆಯ ನಿಖರ ಬೆಲೆ ಹೇಳುವುದು ಮತ್ತು ವಾಲಗ ನೖತ್ಯ ಸ್ಪಧೆ೯ಗಳು ಆಯೋಜಿತವಾಗಿದೆ. ಮಹಿಳಾ ದಸರಾ ಸ್ಪಧಿ೯ಗಳು ಸ್ಥಳದಲ್ಲಿಯೇ ಬೆಳಗ್ಗೆ 10.30 ಗಂಟೆಯೊಳಗಾಗಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಇದೆ.
ಮಹಿಳಾ ದಸರಾ ಕಾಯ೯ಕ್ರಮಗಳನ್ನು ಬೆಳಗ್ಗೆ 10 ಗಂಟೆಗೆ ನಗರ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್ ಅಧ್ಯಕ್ಷೆಯಲ್ಲಿ ಜರುಗುವ ಕಾಯ೯ಕ್ರಮವನ್ನು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದಾರೆ. ಕೂಡಿಗೆ ಕ್ರೀಡಾಶಾಲೆಯ ನಿವೖತ್ತ ಪ್ರಾಂಶುಪಾಲರಾದ ಕುಂತಿಬೋಪಯ್ಯ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಸಮಾಜಸೇವಕರಾದ ದಿವ್ಯ ಮಂಥರ್ ಗೌಡ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ನಗರಸಭೆಯ ನಿವೖತ್ತ ಪೌರಾಯುಕ್ತರಾದ ಪುಪ್ಪವತಿ, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಅಪರ ಜಿಲ್ಲಾಧಿಕಾರಿ ಬಿ.ಎನ್. ವೀಣಾ, ನಗರಸಭೆಯ ಇಂಜಿನಯರ್ ಸೌಮ್ಯ, ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆಯ ಉಪನಿದೇ೯ಶಕ ಎ.ಎಂ.ಬಸವರಾಜು, ದಸರಾ ಸಮಿತಿ ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ರಾಜೇಶ್ ಬಿ.ವೈ, ಖಜಾಂಜಿ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಹಿಳಾ ದಸರಾ ಸಾಂಸ್ಕೃತಿಕ ಕಾಯ೯ಕ್ರಮ :: ಭಾನುವಾರ ಸಂಜೆ 6.30 ಗಂಟೆಗೆ ಮಡಿಕೇರಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಮಹಿಳಾ ತಂಡಗಳಿಂದ ಸಾಂಸ್ಕೖತಿಕ ಕಾಯ೯ಕ್ರಮಗಳು ಆಯೋಜಿತವಾಗಿದೆ.
ಮಹಿಳಾ ದಸರಾ ಅಂಗವಾಗಿ ಮೈಸೂರಿನ ಹೆಸರಾಂತ ಶುಭ ರಾಘವೇಂದ್ರ ತಂಡದಿಂದ ಸಂಗೀತ ಕಾಯ೯ಕ್ರಮ ನಡೆಯಲಿದೆ. ಇದರೊಂದಿಗೆ, ಮಡಿಕೇರಿಯ ಮಹಿಳಾ ವಕೀಲರ ತಂಡದ ನೖತ್ಯ, ಮಡಿಕೇರಿ ಕೊಡವ ಸಮಾಜ ಮಹಿಳಾ ತಂಡದಿಂದ ನೖತ್ಯ, ಕೊಡಗು ಗೌಡ ಮಹಿಳಾ ಒಕ್ಕೂಟ, ಹಿಂದೂ ಮಲಯಾಳಿ ಸಂಘ ಮಡಿಕೇರಿ, ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜ ಮಡಿಕೇರಿ, ಅಯ್ಯಪ್ಪ ಯುವತಿ ಮಂಡಳಿ ನರಿಯಂದಡ, ಹಿಂದೂ ಮಲಯಾಳಿ ಸಂಘ ಮೂನಾ೯ಡು ತಂಡಗಳಿಂದ ವೈವಿಧ್ಯಮಯ ಕಾಯ೯ಕ್ರಮಗಳು ಆಯೋಜಿತವಾಗಿದೆ.
ಇತ್ಯಾಧಿ ವೈವಿಧ್ಯಮಯ ಕಾಯ೯ಕ್ರಮಗಳು ಆಯೋಜಿತವಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.