ಮಡಿಕೇರಿ ಅ.24 : ವಿಜಯದಶಮಿಯ ಅ.24 ರ ರಾತ್ರಿ ಮಡಿಕೇರಿ ನಗರದಲ್ಲಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮಂಟಪಗಳ ತೀರ್ಪಗಾರಿಕೆ ಎಷ್ಟು ಗಂಟೆಗೆ ಎಲ್ಲೆಲ್ಲಿ ನಡೆಯುತ್ತದೆ ಎನ್ನುವ ಬಗ್ಗೆ ಸಮಿತಿ ಅಧ್ಯಕ್ಷ ಹೆಚ್.ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಪೇಟೆ ಶ್ರೀರಾಮ ಮಂದಿರ ರಾತ್ರಿ 10 ಗಂಟೆಗೆ ಗಾಂಧಿ ಮೈದಾನ, ದೇಚೂರು ಶ್ರೀರಾಮಮಂದಿರ ರಾತ್ರಿ 11 ಗಂಟೆಗೆ ಶ್ರೀ ಆಂಜನೇಯ ದೇಗುಲದ ಮುಂಭಾಗ, ಶ್ರೀ ಕೋಟೆ ಗಣಪತಿ ರಾತ್ರಿ 11.45 ಗಂಟೆಗೆ ನಗರ ಪೊಲೀಸ್ ಠಾಣೆ ಮುಂಭಾಗ, ಶ್ರೀ ಚೌಡೇಶ್ವರಿ ರಾತ್ರಿ 12.30 ಗಂಟೆಗೆ ಹೋಟೆಲ್ ಪಾಪ್ಯುಲರ್ ಮುಂಭಾಗ, ಶ್ರೀ ಕೊಟೆ ಮಾರಿಯಮ್ಮ ರಾತ್ರಿ 1.15 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಮುಂಭಾಗ, ಶ್ರೀ ಕೋದಂಡ ರಾಮ ರಾತ್ರಿ 1.45 ಗಂಟೆಗೆ ಮೆಟ್ರೋ ಫ್ರೆಷ್ ಮುಂಭಾಗ, ಶ್ರೀ ಕರವಲೆ ಭಗವತಿ ರಾತ್ರಿ 2.15 ಗಂಟೆಗೆ ಸಿಂಧೂರ್ ಬಟ್ಟೆ ಮಳಿಗೆ ಮುಂಭಾಗ, ಶ್ರೀ ದಂಡಿನ ಮಾರಿಯಮ್ಮ ರಾತ್ರಿ 3 ಗಂಟೆಗೆ ಕೊಡವ ಸಮಾಜದ ಮುಂಭಾಗ, ಶ್ರೀ ಕಂಚಿ ಕಾಮಾಕ್ಷಿ ರಾತ್ರಿ 3.30 ಗಂಟೆಗೆ ವಿನೋದ್ ಮೆಡಿಕಲ್ಸ್ ಮುಂಭಾಗ, ಶ್ರೀ ಚೌಟಿ ಮಾರಿಯಮ್ಮ ಬೆಳಗ್ಗೆ 4 ಗಂಟೆಗೆ ಕಾವೇರಿ ಕಲಾ ಕ್ಷೇತ್ರ ಮುಂಭಾಗ ತೀರ್ಪುಗಾರಿಕೆ ನಡೆಯಲಿದೆಯೆಂದು ತಿಳಿಸಿದರು.










