ಮಡಿಕೇರಿ ಅ.21 : ಅಖಿಲ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ನಿಧನಕ್ಕೆ ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತೀವ್ರ ಸಂತಾಪ ಸೂಚಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಅತ್ಯಂತ ಆತ್ಮೀಯರಾಗಿದ್ದ ಸ್ನೇಹಜೀವಿ ಮೊಣ್ಣಪ್ಪ ಅವರ ನಿಧನ ಅತೀವ ದು:ಖವನ್ನು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊಡವ ಸಮಾಜ, ಸಹಕಾರಿ ಕ್ಷೇತ್ರದ ಸೇವೆ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಂಡಿದ್ದ ಮೊಣ್ಣಪ್ಪ ಅವರು ಸಾಧು, ಸಜ್ಜನಿಕೆಯಿಂದ ಇತರರಿಗೆ ಮಾದರಿಯಾಗಿದ್ದರು ಎಂದು ಸೂದನ ಈರಪ್ಪ ಬಣ್ಣಿಸಿದ್ದಾರೆ.









