ಮಡಿಕೇರಿ ಅ.21 : ಪೊನ್ನಂಪೇಟೆಯ ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸಿ.ಐ.ಪಿ.ಯು.ಸಿ ಕಾಲೇಜು ಭಾರತ ಸರ್ಕಾರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ ಜಿಲ್ಲಾ ಆಡಳಿತ .ಜಿಲ್ಲಾ ಪಂಚಾಯತ್ ಕೊಡಗು ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ವಿರಾಜಪೇಟೆ ತಾಲ್ಲೂಕು ಯುವ ಒಕ್ಕೂಟ ಇವರ ಅಶ್ರಯದಲ್ಲಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನ ನಡೆಯಿತು.
ಪೊನ್ನಂಪೇಟೆ ತಾಲ್ಲೂಕು ಮಟ್ಟದ ಅಮೃತ ಕಳಸ ಯಾತ್ರೆಯಲ್ಲಿ ಸಿ.ಐ.ಟಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬೋದಕ ವೃಂದದವರು ಮನೆ ಮನೆಗೆ ತೆರಳಿ ಮಣ್ಣನ್ನು ಸಂಗ್ರಹಿಸಿದರು. ಜೊತೆಗೆ ಅತಿಥಿ ಗಣ್ಯರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವೃಂದದವರು ಅಮೃತ ಕಳಸಕ್ಕೆ ಮಣ್ಣನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮವು ಕೊಡವ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಸಿ.ಪಿ.ರಾಕೇಶ್ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಅಮೃತ ಕಳಸದಲ್ಲಿ ಸಂಗ್ರಹಿಸಿದ ಮಣ್ಣನ್ನು ಜಿಲ್ಲಾ ಯುವ ಒಕ್ಕೂಟ ಮುಖಾಂತರ ನೆಹರು ಯುವ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮ ನೇತೃತ್ವ ವಹಿಸಿದ ಜಿಲ್ಲಾ ಯುವ ಒಕ್ಕೂಟ ಕೊಡಗು ಒಕ್ಕೂಟದ ಅಧ್ಯಕ್ಷರಾದ ಪಿ.ಪಿ. ಸುಕುಮಾರ್ ಕಾರ್ಯಕ್ರಮ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಹುತಾತ್ಮ ಯೋಧರ ಸ್ಮಾರಕದ ಆವರಣದಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಕುರಿತು ಕಾಯಕಲ್ಪವನ್ನು ರೂಪಿಸಿದ್ದು, ಭಾರತದ ಪ್ರತಿ ಮನೆಮನೆಯಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಯ ಹುತಾತ್ಮರ ಸ್ಮಾರಕದ ಉದ್ಯಾನವನಕ್ಕೆ ರವಾನಿಸಲಾಗುತ್ತದೆ. ಅಲ್ಲಿ ಔಷಧಿಯ ಗಿಡ ನೆಡಲಾಗುತ್ತದೆ ಎಂದು ತಿಳಿಸಿದರು.
ದೇಶದ ಐಕ್ಯತೆಯ ಧ್ಯೋತಕವಾದ ವಂದೇಮಾತರಂ ಗೀತೆಗೆ ಸಿ.ಐ.ಪಿ.ಯು. ವಿದ್ಯಾರ್ಥಿನಿ ನಿಶಿ ಸರಸ್ವತಿ ನೃತ್ಯ ಪ್ರದರ್ಶನ ನೀಡಿದರು. ದ್ವಿತೀಯ ಪಿ.ಯು.ವಿದ್ಯಾರ್ಥಿನಿ ಅನ್ವಯಿ ಪ್ರತಿಜ್ಞಾವಿಧಿ ಬೋಧಿಸಿದರು.
ಸಿ.ಐ.ಟಿ.ವಿದ್ಯಾರ್ಥಿನಿ ಟಿ.ಯು. ಮಹಿತ ಹುತಾತ್ಮ ಯೋಧರಿಗೆ ನುಡಿನಮನ ಸಲ್ಲಿಸುವ ಸಲುವಾಗಿ ಸುಶ್ರಾವ್ಯವಾಗಿ ಗೀತಾಗಾಯನ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಿ.ಐ.ಟಿ.ಪ್ರಾಂಶುಪಾಲರಾದ ಡಾ.ಎಂ.ಬಸವರಾಜು ಮತ್ತು ಸಿ.ಐ.ಪಿ.ಯು.ಸಿ ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಹಾಗೂ ಜಿಲ್ಲಾ ಯುವ ಒಕ್ಕೂಟದ ಸಲಹೆಗಾರರಾದ ಕಂದಾದೇವಯ್ಯ ಅವರು ಉಪಸ್ಥಿತರಿದ್ದರು.
ಸಿ.ಐ.ಟಿ. ಹಾಗೂ ಸಿ.ಐ.ಪಿ.ಯು.ಸಿ.ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಹಾಗೂ ನೆಹರು ಯುವ ಕೇಂದ್ರದ ಕಚೇರಿ ಸಿಬ್ಬಂದಿ ದೀಪ್ತಿ ಹಾಗೂ ಸ್ವಯಂ ಸೇವಕರಾದ ರಂಜಿತಾ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಸುಸ್ಮಿತಾ ಅವರು ನಿರೂಪಿಸಿ. ಸ್ವಾಗತಿಸಿ, ವಂದಿಸಿದರು.










