ಮಡಿಕೇರಿ ಅ.22 : ಮಡಿಕೇರಿ ದಸರಾ ಪ್ರಯುಕ್ತ ಸಾಮಾಜಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ‘ದಸರಾ ಸೈಕ್ಲಥಾನ್ 2023’ ನಡೆಯಿತು.
ಯುವ ದಸರಾ ಸಮಿತಿ, ಗ್ರೀನ್ ಸಿಟಿ ಫೋರಂ ಸಹಭಾಗಿತ್ವದಲ್ಲಿ ನಡೆದ ಸೈಕಲ್ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಚಾಲನೆ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಆರಂಭವಾದ ಜಾಥಾ ಜನರಲ್ ತಿಮ್ಮಯ್ಯ ಸರ್ಕಲ್, ಹಳೆ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಎಲ್‌ಐಸಿ ಮಾರ್ಗವಾಗಿ ಸಾಗಿ ಗಾಂಧಿ ಮೈದಾನದಲ್ಲಿ ಕೊನೆಗೊಂಡಿತು.
ಪ್ಲಾಸ್ಟಿಕ್ ಮುಕ್ತ ಕೊಡಗು, ಡ್ರಗ್ಸ್ ಮುಕ್ತ ಕೊಡಗು ಧ್ಯೇಯದೊಂದಿಗೆ ಸೈಕ್ಲಥಾನ್ ಜರುಗಿತು. ಜಾಥಾದಲ್ಲಿ ಪಾಲ್ಗೊಂಡಿದ್ದವರಿಗೆ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಧ್ಯೇಯದ ಕುರಿತಾಗಿ ಪ್ರಮಾಣ ವಚನವನ್ನು ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯಗಣಪತಿ ಬೋಧಿಸಿದರು. ಫೋರಂ ಉಪಾಧ್ಯಕ್ಷ ಕುಕ್ಕೇರ ಜಯಚಿಣ್ಣಪ್ಪ, ಶಕ್ತಿ ದಿನಪತ್ರಿಕೆ ಸಂಪಾದಕ ಜಿ.ಚಿದ್ವಿಲಾಸ್, ಯುವದಸರಾ ಸಮಿತಿ ಅಧ್ಯಕ್ಷ ಕೊತ್ತೊಳಿ ಕವನ್, ಯುವದಸರಾ ಸಮಿತಿ ಪ್ರಮುಖರಾದ ಅಜ್ಜೆಟ್ಟಿರ ಲೋಕೇಶ್, ಸೋಮಶೇಖರ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಗ್ರೀನ್ ಸಿಟಿ ಫೋರಂನ ಕಿಶೋರ್‌ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.










