ಮಡಿಕೇರಿ ಅ.30 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಇಂಗ್ಲೀಷ್ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ವತಿಯಿಂದ ನ.2 ರಂದು ಕರ್ನಾಟಕದಲ್ಲಿ ದೇವದಾಸಿ ಪದ್ಧತಿಯ ಕುರಿತು “ಗಾಡ್ಸ್ ವೈಫ್ಸ್ ಮೆನ್ಸ್ ಸ್ಲೇವ್” ಎಂಬ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.
ಅಪರಾಹ್ನ 1.45ಕ್ಕೆ ಕಾಲೇಜಿನ ವಿಚಾರ ಸಂಕಿರಣ ಕೊಠಡಿಯಲ್ಲಿ ಪ್ರದರ್ಶನ ಗೊಳ್ಳುವ ಸಾಕ್ಷ್ಯ ಚಿತ್ರವನ್ನು ಕಾಲೇಜಿನ ಆಂಗ್ಲ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿರುವ ಡಾ. ನಯನ ಕಾಶ್ಯಪ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಸಂಶೋಧನೆಯನ್ನು ಕೈಗೊಳ್ಳುತ್ತಿರುವ ಸಂಶೋಧನಾರ್ಥಿ ಪೂರ್ಣಿಮಾ ರವಿ ಅವರು ನಿರ್ಮಿಸಿ ತಯಾರಿಸಿದ್ದಾರೆ.
ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಖ್ಯಾತ ಸಾಕ್ಷ್ಯಚಿತ್ರ ತಯಾರಕರು, ಸಿನಿಮಾ ನಿರ್ಮಾತೃ ಕೆ.ಪ್ರಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ವಹಿಸಿಕೊಳ್ಳಲಿದ್ದಾರೆ.
ಸಾಮಾಜಿಕ ಪಿಡುಗಾದ ದೇವದಾಸಿ ಪದ್ಧತಿಯ ಕುರಿತು ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಸಂಶೋಧನೆ ಕೈಗೊಳ್ಳುತ್ತಿರುವ ಪೂರ್ಣಿಮಾ ರವಿ ತಮ್ಮ ಸಂಶೋಧನೆಯ ಜೊತೆಯಲ್ಲಿಯೇ “ಗಾಡ್ಸ್ ವೈಫ್ಸ್ ಮೆನ್ಸ್ ಸ್ಲೇವ್” ಎಂಬ ಸಾಕ್ಷ್ಯಚಿತ್ರವನ್ನು ರೂಪಿಸಿದ್ದಾರೆ. ಆ ಮೂಲಕ ದೇವದಾಸಿ ಪದ್ಧತಿಯ ಕರಾಳ ಮುಖವನ್ನು ತರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ.
ಸಾಕ್ಷ್ಯಚಿತ್ರ ವೀಕ್ಷಣೆಯ ನಂತರ ಪೂರ್ಣಿಮಾ ರವಿ ಅವರ ಜೊತೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಸಂವಾದ ನಡೆಸಲಿದ್ದಾರೆ.