Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬಾಳೆಲೆ : ರೂ. 27.23 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*
  • *ಶ್ರೀಮಂಗಲದಲ್ಲಿ ಮಹಿಳಾ ದಿನಾಚರಣೆ : ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆಶಯ : ಶಾಸಕ ಎ.ಎಸ್.ಪೊನ್ನಣ್ಣ*
  • *ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*
  • *ಮಾ.8 ರಂದು ಬಿಟ್ಟಂಗಾಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ*
  • *ಕೊಡವ ಅಭಿವೃದ್ಧಿ ನಿಗಮ ಘೋಷಣೆ : ಯುಕೊ ಸಂಭ್ರಮಾಚರಣೆ : ಶಾಸಕ ಪೊನ್ನಣ್ಣ, ಮಂಜು ಚಿಣ್ಣಪ್ಪಗೆ ಸನ್ಮಾನ
  • *ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ*
  • *ತಿತಿಮತಿ : ರೈಲ್ವೆ ಬ್ಯಾರಿಕೆಡ್ ಅಳವಡಿಸುವ ಕಾಮಗಾರಿ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*
  • *ಪ್ರೊ.ಅಶೋಕ ಸಂಗಪ್ಪ ಆಲೂರ ಅವರಿಗೆ ಭಾರತರತ್ನ ಡಾ.ಸರ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ*
  • *ಸುಂಟಿಕೊಪ್ಪ : ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಬೇಕು : ಎಸ್.ಐ.ಮುನಿರ್‍ಅಹ್ಮದ್*
  • *ವಿರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಎಸ್ ವಾರ್ಷಿಕ ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ಗ್ರಾಮ ಸ್ವಚ್ಛತಾ ಅಭಿಯಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನಮಸ್ತೆ ಸ್ನೇಹಿತರೇ : ಮಡಿಕೇರಿ ದಸರಾ ಆಚರಣೆಯ ಕುರಿತು ನನ್ನ ಮನದಾಳದ ಮಾತು : ಯುವಕ, ಮಹಿಳೆ ಹಾಗೂ ಮಗುವನ್ನು ರಕ್ಷಣೆ ಮಾಡಿದೆವು : ರೋಗಿಗಳ ಸ್ಥಳಾಂತರವಾಗಿತ್ತು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

*ನಮಸ್ತೆ ಸ್ನೇಹಿತರೇ : ಮಡಿಕೇರಿ ದಸರಾ ಆಚರಣೆಯ ಕುರಿತು ನನ್ನ ಮನದಾಳದ ಮಾತು : ಯುವಕ, ಮಹಿಳೆ ಹಾಗೂ ಮಗುವನ್ನು ರಕ್ಷಣೆ ಮಾಡಿದೆವು : ರೋಗಿಗಳ ಸ್ಥಳಾಂತರವಾಗಿತ್ತು*

ನವೆಂಬರ್ 4, 20235 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

200 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಶಕ್ತಿ ದೇವತೆಗಳ ಕರಗಗಳನ್ನು ಮೂಲಕ ಆರಂಭಗೊಳ್ಳುವುದು ಒಂದು ವಿಶೇಷ. ಅರಸರಕಾಲದಲ್ಲಿ ಮಡಿಕೇರಿ ನಾಡಿಗೆ ಮಾರಕ ಸಾಂಕ್ರಮಿಕ ಕಾಯಿಲೆಗಳು ಕಾಣಿಸಿಕೊಂಡು ಸಾವು-ನೋವು ಸಂಭವಿಸುವುದರೊಂದಿಗೆ, ಜನರು ಗುಳೆ ಹೋಗುವ ಪರಿಸ್ಥಿತಿ ತಲೆದೋರಿತ್ತು. ಇದರಿಂದ ಚಿಂತೆಗೀಡಾದ ಅರಸು ನಾಡಿನ 4 ಶಕ್ತಿ ದೇವತೆಗಳ ಮೊರೆ ಹೋಗಿ, ನಾಡಿನ ಜನರನ್ನು ಕಾಪಾಡುವಂತೆ ಬೇಡಿಕೊಂಡಿದ್ದರು ಎಂಬ ಹಿನ್ನೆಲೆಯನ್ನು ನಾನು ಜಿಲ್ಲೆಯ ಕೆಲ ಹಿರಿಯರ ಮೂಲಕ ತಿಳಿದುಕೊಂಡಿದ್ದೇನೆ.
ಈ ಹಿನ್ನೆಲೆಯಲ್ಲ್ಲಿ ಅರಸರು 4 ಶಕ್ತಿ ದೇವತೆಗಳ ಕರಗಗಳನ್ನು ಮಡಿಕೇರಿ ದೊಡ್ಡಪೇಟೆಗೆ ಕರೆ ತಂದು ಪ್ರದಕ್ಷಿಣೆ ನಡೆಸಿದ್ದರು. ಕಾಕತಾಳೀಯ ಎಂಬಂತೆ ಸಾಂಕ್ರಾಮಿಕ ರೋಗಗಳು ಮರೆಯಾಗಿ ಮಡಿಕೇರಿ ನಾಡು ಯಥಾಸ್ಥಿತಿಗೆ ಮರಳಿತ್ತು. ಅಂದು ಅರಸರಿಂದ ಪ್ರಾರಂಭವಾದ ಕರಗಗಳ ಪ್ರದಕ್ಷಿಣೆ ಇಂದು ದೇವಾಲಯ ಸಮಿತಿಗಳ ಮೂಲಕ ಉತ್ಸವದ ರೂಪದಲ್ಲಿ ಆಚರಿಸಿಕೊಂಡು ಬರಲಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಆದರೆ ನಾನು ಅಂದುಕೊಂಡ ವೈಭವದ ದಸರಾ ನಡೆಯಲಿಲ್ಲ ಮತ್ತು ನಡೆಯುತ್ತಿಲ್ಲ ಎಂಬ ನೋವು ನನ್ನಲ್ಲಿದೆ. ಹೊರ ಜಿಲ್ಲೆಯಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಮಡಿಕೇರಿ ದಸರಾ ಬಗ್ಗೆ ಬಹಳಷ್ಟು ಕೇಳಿದ್ದೆ, ಆದರೆ ಒಬ್ಬ ಅಧಿಕಾರಿಯಾಗಿ ಮಡಿಕೇರಿ ದಸರಾವನ್ನು ನೋಡಿದ ನನಗೆ ಒಂದಷ್ಟು ಬದಲಾವಣೆ ಇದ್ದರೆ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಬಹುದೇನೋ ಎಂಬ ವೈಯಕ್ತಿಕ ಭಾವನೆ ಮೂಡಿದೆ. ನಾನು ದಸರಾದಲ್ಲಿ ನೋಡಿದ ಮತ್ತು ನಿಭಾಯಿಸಿದ ಜವಾಬ್ದಾರಿಯಡಿಯಲ್ಲಿ ಸಂಭವಿಸಿದ ಮತ್ತು ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳ ಬಯಸುತ್ತೇನೆ.
ನಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳು, ಸ್ಥಳೀಯ ಪ್ರತಿಭೆಗಳು, ಭಾಷೆ, ಎಲ್ಲವು ಮತ್ತು ಎಲ್ಲರಿಗೂ ಕಣ್ಣುತುಂಬಿಕೊಳ್ಳುವಂತ ಆಚರಣೆಯಾಗಬೇಕೆಂಬುವುದೇ ನನ್ನ ಮತ್ತು ಈ ನಾಡಿನ ಹಲವರ ಆಶಯವು ಹೌದು ಎಂದು ನಾನು ನಂಬುತ್ತೇನೆ. ನನಗೆ ಇಂತಹ ಗತಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಭಾರತೀಯ ಶ್ರೀಮಂತ ಸಂಸ್ಕೃತಿಗಳು ದಾರಿ ತಪ್ಪದೆ, ನಮ್ಮ ಮುಂದಿನ ಯುವ ಪೀಳಿಗೆಗೆ ಮಾದರಿಯಾಗುವಂತಿರಬೇಕು. ಪಾಶ್ಚಾತ್ಯ ಸಂಸ್ಕೃತಿಯನ್ನು ಮಿತವಾಗಿ ಬಳಸಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸೋಣ.

ದಸರಾ ಹೇಗಿರಬೇಕು ಎಂಬುವುದನ್ನು ನಾನೊಬ್ಬ ಅಧಿಕಾರಿಯಾಗಿ, ಸಾಮಾನ್ಯ ಪ್ರಜೆಯಾಗಿ ಇಲ್ಲಿ ಹಂಚಿಕೊಂಡಿದ್ದೇನೆ.
ನಾಡ ಹಬ್ಬ ದಸರಾದಲ್ಲಿ ನಾಡಿನ ಎಲ್ಲರು ಭಾಗಿಯಾಗುವಂತಿರಲಿ. ಮಡಿಕೇರಿ ದಸರಾ ಎಲ್ಲರ ದಸರಾದಂತಿರಬೇಕು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪ್ರತಿ ವರ್ಷ ದಸರಾವನ್ನು ಆಚರಿಸಲಾಗುತ್ತಿದೆ. ಆದರೆ ದಶಮಂಟಪಗಳ ಶೋಭಾಯಾತ್ರೆಯಂದು ಸಾಮರ್ಥ್ಯ ಇರುವವರು ಮಾತ್ರ ದಸರಾ ನೋಡುವ ಪರಿಸ್ಥಿತಿ ಇದೆ. ಇದನ್ನು ನಾನು ಕರ್ತವ್ಯ ನಿಭಾಯಿಸಿ ಗಮನಿಸಿದ್ದೇನೆ. ಮಕ್ಕಳು, ವೃದ್ಧರು, ಮಹಿಳೆಯರು ಕುಟುಂಬ ಸಮೇತರಾಗಿ ಬಂದು ದಸರಾದಲ್ಲಿ ಭಾಗಿಯಾಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಆದರೆ ಇದು ಸಾಧ್ಯವಾಗುತ್ತಿಲ್ಲ ಎಂಬುದು ವಿಷಾಧಕರ. ಯುವಕರು ಮತ್ತು ಗುಂಪಿನಲ್ಲಿ ರಭಸದಿಂದ ನುಗ್ಗಿಕೊಂಡು ಹೋಗುವವರು ಮಾತ್ರ ದಸರಾ ನೋಡುವಂತಾಗಿದೆ.
ಹತ್ತು ದೇವಾಲಯಗಳ ಸಮಿತಿಯವರು ವಿಶೇಷ ರೀತಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಂಟಪವನ್ನು ನಿರ್ಮಿಸುತ್ತಾರೆ. ಇದಕ್ಕೆ ಅಂದಾಜು ಕನಿಷ್ಠ ಮೂರು ತಿಂಗಳಾದರೂ ಸಮಯ ತೆಗೆದುಕೊಳ್ಳುತ್ತಾರೆಂದು ತಿಳಿದುಕೊಂಡಿದ್ದೇನೆ. ಆದರೆ ಇಷ್ಟು ಸುಂದರವಾದ ಮತ್ತು ಅದ್ಭುತವಾದ ಅಥಗರ್ಭಿತವಾದ ಮಂಟಪವನ್ನು ನಾನು ಎಲ್ಲೂ ನೋಡಿಲ್ಲ. ಇಂತಹ ಐತಿಹಾಸಿಕ ಕಥಾಸಾರಾಂಶಗಳ ದೃಶ್ಯಗಳನ್ನು ನಾಡಿನ ಎಲ್ಲಾ ಜನರು ನೋಡಬೇಕಾಗಿದೆ. ಮಡಿಕೇರಿ ದಸರಾಗೆ ಕೊನೆಯ ದಿನ ಅಪಾರ ಜನ ಸೇರುತ್ತಾರೆ. ಆದರೆ ಮಂಟಪಗಳ ಕಥಾ ಸಾರಾಂಶವನ್ನು ಕೇವಲ ಶೇ.5 ರಿಂದ 8 ರಷ್ಟು ಮಂದಿ ನೋಡುತ್ತಾರೆ ಎಂದು ನನ್ನ ಅನಿಸಿಕೆ.
ನಾನೂ ಕೂಡ ಹತ್ತು ಮಂಟಪಗಳನ್ನು ನೋಡಬೇಕೆಂದು ಕುತೂಹಲಂದಿದ್ದೆ. ಆದರೆ ನನಗೆ ಎರಡು ಮಂಟಪಗಳನ್ನು ಮಾತ್ರ ನೋಡಲು ಸಾಧ್ಯವಾಯಿತು. ಹತ್ತು ಮಂಟಪಗಳನ್ನು ನೋಡಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು.

ತುಂಬಾ ನೂಕು ನುಗ್ಗಲು ಕಂಡೆ ಮಡಿಕೇರಿ ದಸರಾದಲ್ಲಿ ಜನ ಮಂಟಪದ ಸಮೀಪದಲ್ಲಿ ಓಡಾಡಲೂ ಕೂಡ ಕಷ್ಟದ ಪರಿಸ್ಥಿತಿ ಉಂಟಾಗಿತ್ತು. ನೂಕು ನುಗ್ಗಲು ಉಂಟಾಗಿ ಜನರು ಸಮಸ್ಯೆ ಎದುರಿಸಿದ್ದನ್ನು ವೈಯಕ್ತಿಕವಾಗಿ ನಾನು ಕಂಡಿದ್ದೇನೆ. ನಗರ ಪೊಲೀಸ್ ಠಾಣೆಯ ಬಳಿ ಯುವಕ, ಮಹಿಳೆ ಮತ್ತು ಮಗುವೊಂದು ಕೆಳಗೆ ಬಿದ್ದು ಮೇಲೇಳಲಾಗದೆ ಕಷ್ಟ ಪಡುತ್ತಿದ್ದರು. ಈ ಸಂದರ್ಭ ನಾನು ಮತ್ತು ನಮ್ಮ ತಂಡ ಲಘು ಲಾಠಿ ಚಾರ್ಜ್ ಮಾಡಿ ಯುವಕ, ಮಹಿಳೆ ಹಾಗೂ ಮಗುವನ್ನು ರಕ್ಷಣೆ ಮಾಡಿದೆವು. ಸ್ವಲ್ಪ ತಡವಾಗಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಮಡಿಕೇರಿ ದಸರಾಕ್ಕೂ ಅಳಿಸಲಾಗದ ಕಪ್ಪುಚುಕ್ಕೆಯಾಗುತಿತ್ತು.

::: ಎಲ್ಲರೂ ಎಚ್ಚರ ವಹಿಸಲೇಬೇಕು :::
ಮಂಟಪಗಳಿಂದ 20 ನಿಮಿಷ ಕಥಾ ಸಾರಾಂಶ ಮಾಡಲಾಗುತ್ತದೆ. ಇದು ಉತ್ತಮ ಕೂಡ. ಆದರೆ ಜನರ ಓಡಾಟ ಹೆಚ್ಚಾದ ಸಂದರ್ಭ ಉಸಿರಾಟ ತೊಂದರೆಯಾಗುತ್ತದೆ. ಕೆಲವರು ಕಟ್ಟಡ ಮೇಲೆ ಕುಳಿತು ಕೂಡ ನೋಡಿದ್ದಾರೆ. ಈ ಸಂದರ್ಭ ಕೆಲವರ ಮೇಲೆ ಸಿಡಿಮದ್ದು ಹಾರಿದ್ದನ್ನೂ ಕೂಡ ಗಮನವಿಸಿದ್ದೇನೆ. ಗಾಬರಿಯಾದರೆ ಪರಿಸ್ಥಿತಿ ಏನಾಗುತ್ತದೆ ಎಂಬುದೂ ಕೂಡ ಅಗತ್ಯ.
ರಸ್ತೆಗಿಂತ ಅಗಲವಾದ ಮಂಟಪಗಳು ಮಡಿಕೇರಿ ರಸ್ತೆ ತೀರಾ ಕಿರಿದಾಗಿದೆ. ಆದರೆ ಕೆಲವು ಮಂಟಪಗಳು ರಸ್ತೆಗಿಂತ ದೊಡ್ಡದಾಗಿತ್ತು. ಹೀಗೆ ಮಾಡಿದರೆ ಜನ ಓಡಾಡುವುದು ಹೇಗೆ? ಪ್ರಶಸ್ತಿ ನೀಡುವ ಕಾರಣಕ್ಕಾಗಿ ಎಲ್ಲರೂ ಪೈಪೋಟಿಯಿಂದ ಮಂಟಪಗಳನ್ನು ನಿರ್ಮಿಸುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಂಟಪಗಳ ತಯಾರು ಮಾಡಬೇಕು. ಮಂಟಪವೊಂದರ ವಾಹನದ ತೂಕ ಬ್ಯಾಲೆನ್ಸ್ ಆಗದ ಹಿನ್ನೆಲೆಯಲ್ಲಿ ಟ್ರ‍್ಯಾಕ್ಟರ್ ಮಗುಚಿದ ಘಟನೆ ಎಂ.ಎಂ. ಸರ್ಕಲ್ ನಲ್ಲಿ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗದಿರುವುದು ನಮ್ಮ ನಾಡಿನ ಪುಣ್ಯ. ಈ ಘಟನೆ ನಮಗೆ ಪಾಠವಾಗಬೇಕು. ಅಲ್ಲಿ ಜನರು ಇದ್ದಿದ್ದರೆ ಭಾರಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ ದೇವರ ಕೃಪೆಯಿಂದ ದೊಡ್ಡ ಅನಾಹುತ ತಪ್ಪಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲ ಮಂಟಪ ಸಮಿತಿಯವರು ಜಾಗೃತರಾಗಬೇಕು. ಅವೈಜ್ಞಾನಿಕ ಮಂಟಪಗಳ ನಿರ್ಮಾಣ ಒಂದಲ್ಲ ಒಂದು ದಿನ ಸಮಸ್ಯೆಯಾಗುತ್ತದೆ.

::: ಹೆಚ್ಚು ಧ್ವನಿವರ್ಧಕ ಬಳಕೆ :::
ಮಡಿಕೇರಿ ದಸರಾದಲ್ಲಿ ನಿಯಮ ಅನ್ನುವುದಕ್ಕಿಂತ ಅವಶ್ಯಕತೆ ಮೀರಿ ಹೆಚ್ಚು ಧ್ವನಿವರ್ಧಕವನ್ನು ಬಳಕೆ ಮಾಡಿದ್ದಾರೆ. ಮಡಿಕೇರಿಯ ಜಿಲ್ಲಾಸ್ಪತ್ರೆಯಿಂದ ಕೆಲವು ರೋಗಿಗಳನ್ನು ದಸರಾ ಹಿನ್ನೆಲೆಯಲ್ಲಿ ಬೇರೆ ಕಡೆ ಸ್ಥಳಾಂತರ ಮಾಡಿರುವುದು ಕೂಡ ನನ್ನ ಗಮನಕ್ಕೆ ಬಂದಿದೆ. ಅಲ್ಲದೆ ನಗರದ ಹಿರಿಯ ನಾಗರಿಕರು ಮನೆಗೆ ಬೀಗ ಹಾಕಿ ಠಾಣೆಗೆ ಮಾಹಿತಿ ನೀಡಿ ಸಂಬಂಧಿಕರ ಮನೆಗೂ ತೆರಳಿದ ಉದಾಹರಣೆ ಇದೆ.
ದಸರಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ, ಅನಾಹುತ ಸಂಭವಿಸಿದಂತೆ ಮದ್ಯಪಾನವನ್ನು ನಿಷೇಧಿಸಲಾಗಿರುತ್ತದೆ, ಅದರರ್ಥ ಬಂದವರು ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ಹಿನ್ನಲೆ ಮತ್ತು ದಾಖಲೆಗಳಿವೆ. ಆದರೂ ಬಹುತೇಕರು ಇತರೆ ಕಡೆಗಳಿಂದ ಮದ್ಯವನ್ನು ಸೇವಿಸಿ ದಸರಾಗೆ ಬಂದು ತೊಂದರೆ ಕೊಡುತ್ತಾರೆ. ಅಲ್ಲದೆ ಮಹಿಳೆಯರ ಹಾಗೂ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪಗಳು ಕೂಡ ಪ್ರತಿವರ್ಷ ಕೇಳಿಬರುತ್ತಿರುವ ಉದಾಹರಣೆಗಳಿವೆ. ಇದರಿಂದ ಹಲವು ಜನರು ಕುಟುಂಬ ಸಮೇತರಾಗಿ ದಸರಾಗೆ ಆಗಮಿಸಲು ಹಿಂದೇಟು ಹಾಕುವುದು ಕಂಡುಬಂದಿದೆ. ಸಣ್ಣ ಸಣ್ಣ ರಸ್ತೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಾಡುವ ದಸರಾವನ್ನು ಸಾಮಾನ್ಯ ಜನರು ವೀಕ್ಷಣೆ ಮಾಡಲು ಆಗುತ್ತಿಲ್ಲ.

::: ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು :::
ದಸರಾ ಎಂದರೆ ನಮ್ಮ ಹಬ್ಬ ಆಗಬೇಕು. ನಮ್ಮ ನಾಡಿನ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ನಮ್ಮದೇ ಸಂಸ್ಕೃತಿಯನ್ನು ಬಿಂಬಿಸುವ ಹಲವು ವಾದ್ಯಗಳು ಸಂಗೀತಗಳು ಇಲ್ಲಿವೆ. ಅದನ್ನು ನಂಬಿ, ಗೌರವಿಸಿ ಬದುಕುವ ಹಲವು ಕಲಾಕುಟುಂಬಗಳು ನಮ್ಮಲ್ಲಿವೆ, ನಾವು ನಮ್ಮ ಸ್ಥಳೀಯ ವೇದಿಕೆಗಳಲ್ಲಿ ಇಂತಹ ಹಬ್ಬಗಳಲ್ಲಿ ಅವಕಾಶ ನೀಡದೆ ಹೋದಲ್ಲಿ ನಮ್ಮ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ನಾವೇ ನಾಶ ಮಾಡಿದಂತಾಗುತ್ತದೆ. ಅಲ್ಲದೆ ಅದನ್ನು ನಂಬಿದವರಿಗೂ ಅವಕಾಶವಿಲ್ಲದಂತಾಗುತ್ತದೆ. ಡಿಜೆ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಇದೆ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಸ್ಥಳೀಯರನ್ನು ಪ್ರೋತ್ಸಾಯಿಸುವ ಮೂಲಕ ಅವರಿಗೂ ಆದಾಯ ಸಿಕ್ಕರೆ ಒಳ್ಳೆಯದು ಅಲ್ಲವೇ.

::: ಇದಕ್ಕೆ ಏನು ಪರಿಹಾರ? :::
ಈ ಹಿಂದೆ ಮಡಿಕೇರಿ ದಸರಾದಲ್ಲಿ ಹತ್ತು ಮಂಟಪಗಳನ್ನೂ ಕೂಡ ಒಂದೇ ಕಡೆಗಳಲ್ಲಿ ನಿಂತು ನೋಡುತ್ತಿದ್ದರು ಎಂದು ಸಹುದ್ಯೋಗಿಗಳೊಂದಿಗೆ ತಿಳಿದುಕೊಂಡಿದ್ದೇನೆ. ಎಲ್ಲಾ ಮಂಟಪಗಳು ನಗರದ ಮುಖ್ಯರಸ್ತೆಯಲ್ಲಿ ಹಾದುಹೋಗುತ್ತಿದ್ದ ಬಗ್ಗೆಯೂ ಕೇಳಿದ್ದೇನೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಒಂದೆಡೆ ಕುಳಿತು ಮಂಟಪಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಜನರೇ ಮಂಟಪವಿರುವ ಕಡೆ ನೂಕುನುಗ್ಗಲಿನ ಮಧ್ಯೆ ಹೋಗಿ ನೋಡಬೇಕಾಗಿದೆ. ಆದ್ದರಿಂದ ಮಡಿಕೇರಿಯಲ್ಲಿ ನಡೆಯುವ ದೊಡ್ಡ ಉತ್ಸವ ಮಡಿಕೇರಿ ದಸರಾ ಆಗಿರುವುದರಿಂದ ಮೊದಲು ನಾವೆಲ್ಲರೂ ದೊಡ್ಡ ಮೈದಾನವನ್ನು ಗುರುತಿಸಬೇಕು. ಎಲ್ಲರೂ ಕೂಡ ವ್ಯವಸ್ಥಿತವಾಗಿ ಕುಳಿತು ಮಂಟಪಗಳನ್ನು ಕಣ್ತುಂಬಿಸಿಕೊಳ್ಳುವಂತೆ ಮಾಡಬೇಕು. ಯುವಕರು ಮಾತ್ರವಲ್ಲದೆ ಎಲ್ಲಾ ವಯೋಮಾನದವರು ಅಲ್ಲಿಗೆ ವೀಕ್ಷಿಸುವಂತಿರಬೇಕು. ಮಡಿಕೇರಿ ದಸರಾದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ರಕ್ಷಣೆ ಇದೆ ಎಂಬ ಮನೋಭಾವನೆ ಎಲ್ಲರಲ್ಲೂ ಮೂಡುವಂತಾಗಬೇಕು. ದಸರಾ ಸಂದರ್ಭದಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಮಾಡಬೇಕು. ಯಾವುದೇ ಭೀತಿ ಇಲ್ಲದೆ ದಸರಾವನ್ನು ಜನರು ವೀಕ್ಷಣೆ ಮಾಡುವಂತಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ನನ್ನ ಸಿಬ್ಬಂದಿವರ್ಗಕ್ಕೆ ವಿಶೇಷ ಧನ್ಯವಾದಗಳು

ಇಂತಿ ನಿಮ್ಮ
ಕೆ.ರಾಮರಾಜನ್, ಐಪಿಎಸ್
ಪೊಲೀಸ್ ಅಧೀಕ್ಷಕರು,
ಕೊಡಗು ಜಿಲ್ಲೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬಾಳೆಲೆ : ರೂ. 27.23 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*

ಮಾರ್ಚ್ 7, 2026

*ಶ್ರೀಮಂಗಲದಲ್ಲಿ ಮಹಿಳಾ ದಿನಾಚರಣೆ : ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆಶಯ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 7, 2026

*ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*

ಮಾರ್ಚ್ 7, 2026

*ಶ್ರೀಮಂಗಲದಲ್ಲಿ ಮಹಿಳಾ ದಿನಾಚರಣೆ : ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆಶಯ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.7 NEWS DESK : ಆಧುನಿಕ ಸಮಾಜದಲ್ಲಿ ಮಹಿಳೆಯರಿಗೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಮಹಿಳೆಯರು ಸಮಾಜದ ಮುನ್ನೆಲೆಗೆ ಬಂದಲ್ಲಿ…

*ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ*

ಮಾರ್ಚ್ 7, 2026

*ಮಾ.8 ರಂದು ಬಿಟ್ಟಂಗಾಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ*

ಮಾರ್ಚ್ 7, 2026

*ಕೊಡವ ಅಭಿವೃದ್ಧಿ ನಿಗಮ ಘೋಷಣೆ : ಯುಕೊ ಸಂಭ್ರಮಾಚರಣೆ : ಶಾಸಕ ಪೊನ್ನಣ್ಣ, ಮಂಜು ಚಿಣ್ಣಪ್ಪಗೆ ಸನ್ಮಾನ

ಮಾರ್ಚ್ 7, 2026

*ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ*

ಮಾರ್ಚ್ 7, 2026

*ತಿತಿಮತಿ : ರೈಲ್ವೆ ಬ್ಯಾರಿಕೆಡ್ ಅಳವಡಿಸುವ ಕಾಮಗಾರಿ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*

ಮಾರ್ಚ್ 7, 2026

*ಪ್ರೊ.ಅಶೋಕ ಸಂಗಪ್ಪ ಆಲೂರ ಅವರಿಗೆ ಭಾರತರತ್ನ ಡಾ.ಸರ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ*

ಮಾರ್ಚ್ 7, 2026

*ಸುಂಟಿಕೊಪ್ಪ : ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಬೇಕು : ಎಸ್.ಐ.ಮುನಿರ್‍ಅಹ್ಮದ್*

ಮಾರ್ಚ್ 7, 2026

*ವಿರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಎಸ್ ವಾರ್ಷಿಕ ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ಗ್ರಾಮ ಸ್ವಚ್ಛತಾ ಅಭಿಯಾನ*

ಮಾರ್ಚ್ 7, 2026

*ಹವ್ಯಕ ಅಕಾಡೆಮಿ, ಕೊಡವ ನಿಗಮ : ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಮತ್ತು ಸಮುದಾಯದ ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆ : ಸರಕಾರದ ಕ್ರಮವನ್ನು ಸ್ವಾಗತಿಸಿದ ಸಿಎನ್‌ಸಿ*

ಮಾರ್ಚ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.