ಮಡಿಕೇರಿ ನ.9 : ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪ ಚಿನ್ನ ಗೆದ್ದಿದ್ದಾರೆ.
ಕೊಯಮತ್ತೂರಿನಲ್ಲಿ ನಡೆದ 38ನೇ ರಾಷ್ಟ್ರೀಯ ಜ್ಯೂನಿಯರ್ ಕ್ರೀಡಾಕೂಟದಲ್ಲಿ 20 ವಷ೯ದೊಳಗಿನ ಮಹಿಳೆಯರ ವಿಭಾಗದ 100 ಮೀಟರ್ ಹಡ೯ಲ್ಸ್ ನಲ್ಲಿ ಉನ್ನತಿ ಅಯ್ಯಪ್ಪ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈಕೆ ಮಡಿಕೇರಿ ಮೂಲದವರಾಗಿದ್ದು, ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಮತ್ತು ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ಅವರ ಪುತ್ರಿ.








