ನಾಪೋಕ್ಲು ಡಿ.8 : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಾಪೋಕ್ಲು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಬಲಮುರಿ ಗ್ರಾಮದ ತೌಫಿಕ್ ಹಾಗೂ ಕಾಂತೂರು ಗ್ರಾಮದ ತಿಮ್ಮಯ್ಯ ಎಂಬವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪಾರಾಣೆ- ಬಲಮುರಿ ಸಂಪರ್ಕ ರಸ್ತೆಯ ಬಲಮುರಿ ಗ್ರಾಮದ ಸೇತುವೆ ಕೆಳ ಭಾಗದ ರಸ್ತೆಯ ಬಳಿ ಗಾಂಜಾ ಸೇವಿಸಿದ್ದ ಸಂಶಯದ ಮೇರೆಗೆ ತನಿಖೆ ಕೈಗೊಳ್ಳಲಾಗಿತ್ತು. ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಫಾರೆನ್ಶಿಕ್ ವಿಭಾಗದ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆರೋಪಿಗಳು ಗಾಂಜಾ ಸೇವನೆ ಮಾಡಿದ್ದು ದೃಡಪಟ್ಟಿದೆ. ಈ ಹಿನ್ನಲೆ ಆರೋಪಿಗಳ ವಿರುದ್ಧ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಂಡಿದ್ದಾರೆ.
ವರದಿ : ದುಗ್ಗಳ ಸದಾನಂದ







