ಮಡಿಕೇರಿ ಜ.10 : ಮಡಿಕೇರಿಯ ಕೊಡಗು ವಿದ್ಯಾಲಯದ 7ನೇ ತರಗತಿ ತರಗತಿ ವಿದ್ಯಾಥಿ೯ಗಳು ರಾಜ್ಯಮಟ್ಟದ ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆಆಯ್ಕೆಯಾಗಿದ್ದು, ಜೇನುನೊಣಗಳ ಸಂರಕ್ಷಣೆಗೆ ಸಂಬಂಧಿತ ಪ್ರಬಂಧ ಮಂಡಿಸುತ್ತಿದ್ದಾರೆ.
ಕೊಡಗು ವಿದ್ಯಾಲಯದ ವಿಜ್ಞಾನ ಶಿಕ್ಷಕಿ ಎಮ್. ಎಸ್.ಶೃತಿ ಅವರ ಮಾಗ೯ದಶ೯ನದಲ್ಲಿ ವಿದ್ಯಾಥಿ೯ಗಳಾದ ಶ್ರೇಯ ಕಿರಣ್ ಮತ್ತು ಶ್ಲೋಕ್ಸಿ. ಸಂಶೋಧನಾತ್ಮಕ ಪ್ರಬಂಧವನ್ನು ಜೇನುನೊಣ ಕುರಿತಂತೆ ಮಂಡಿಸಲಿದ್ದಾರೆ.
ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಜೀವಸಂಕುಲದಲ್ಲಿ ಎರೆಹುಳು ಕೃಷಿಯಲ್ಲಿ ರೈತನ ಮಿತ್ರನಾಗಿರುವಂತೆ ಕೀಟಗಳ ಗುಂಪಿಗೆ ಸೇರುವ ಜೇನುಹುಳುವಿನದೂ ಕೃಷಿಯಲ್ಲಿ ವಿಶಿಷ್ಟ ಪಾತ್ರವಿದೆ.
ಪರಾಗ ಪ್ರಕ್ರಿಯೆಯ ಮೂಲಕ ತಮ್ಮ ಆಹಾರವನ್ನು ಪಡೆದುಕೊಳ್ಳುವ ಶ್ರಮದಲ್ಲಿ ರೈತ ಬೆಳೆಯುವ ಆಹಾರ ಬೆಳೆಗಳ ಇಳುವರಿಯನ್ನು ಹೆಚ್ಚಿಸುವ ಕಾಯ೯ ಜೇನುಹುಳುವಿನಿಂದ ಆಗುತ್ತದೆ. ಆಯುವೇ೯ದ, ನಾಟಿ ಔಷಧಿಗಳಲ್ಲಿ ಜೇನಿನದು ಪ್ರಮುಖ ಪಾತ್ರವಾಗಿದೆ.
ಆಹಾರಕ್ರಮ, ಸೌಂದಯ೯ವಧ೯ಕಗಳಲ್ಲಿಯೂ ಜೇನು ಬಹು ಉಪಯೋಗಗಳನ್ನು ಹೊಂದಿದೆ.
ಜೇನು ಹುಳುಗಳು ಪರಿಸರ ಸಮತೋಲನದಲ್ಲಿಯೂ ಪ್ರಧಾನ ಪಾತ್ರವಹಿಸುತ್ತದೆ. ಕೊಡಗು ಜಿಲ್ಲೆಯ ಮೂಲಬೆಳೆಗಳು, ಕಾಫಿ ಹಾಗೂ ಕರಿಮೆಣಸು. ಇವುಗಳ ಇಳುವರಿಯನ್ನು ಹೆಚ್ಚಿಸುವಲ್ಲಿ ಜೇನುಹುಳುಗಳ ಸೇವೆ ಹಾಗೂ ಕೊಡಗು ಜಿಲ್ಲೆಯ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಜೇನಿನ ಕೊಡುಗೆ ಅನನ್ಯವಾದದ್ದು.
ಆಧುನಿಕ ತಂತ್ರಜ್ಞಾನಗಳು, ಮಾನವನ ಅತಿಯಾದ ದುರಾಸೆಗಳ ಫಲ ಇಂದು ಜೀವಸಂಕುಲಕ್ಕೆ ಕುತ್ತು ಬಂದೊದಗಿದೆ. ಅರಣ್ಯ ನಾಶ, ರಾಸಾಯನಿಕ ಗೊಬ್ಬರಗಳ ಬಳಕೆ, ಕೀಟನಾಶಕಗಳ ಬಳಕೆಗಳಿಗೆ ಬಲಿಯಾಗುತ್ತಿರುವುದರಿಂದಾಗಿ ರೈತನ ಕಾಯ೯ಕ್ಕೆ ಪೂರಕವಾಗಿ ಸಹಕರಿಸುತ್ತಿದ್ದ ಜೇನುಹುಳಗಳು ಕೂಡ ಅಳಿವಿನ ಅಂಚಿನಲ್ಲಿವೆ.
ಜೇನುಹುಳುಗಳ ಉಳಿವಿಗಾಗಿ ಪರಾಗಸ್ಪಷ೯ ಸ್ನೇಹಿತೋಟಗಳನ್ನು ಬೆಳೆಸುವ ನಿಟ್ಟಿನಲ್ಲಿ ರೈತಪರ ಚಟುವಟಿಕೆಗಳು ಕಾಯ೯ಗತಗೊಳ್ಳಬೇಕು, ಜೇನಿನ ಮಹತ್ವವನ್ನು ಯುವ ಸಮುದಾಯಕ್ಕೆ ಮನಗಾಣಿಸುವ ವಿಚಾರ ಸಂಕಿರಣಗಳು, ಪ್ರಾತ್ಯಕ್ಷಿಕೆಗಳು ಆಯೋಜನೆಗೊಳ್ಳಬೇಕು.
ನೈಸಗಿ೯ಕವಾಗಿ ನಮಗೆಸಿಗುವ ಹೂವು, ಹಣ್ಣು, ಹಂಪಲು, ತರಕಾರಿಗಳ ಬೆಳೆಯ ಹಿಂದೆ ಇರುವುದು ಜೇನುನೊಣಗಳ ಪರಾಗ ಸ್ಪಷ೯ ಶ್ರಮ.
ಇವುಗಳ ಅಗತ್ಯತೆ, ಅನಿವಾಯ೯ತೆಗಳನ್ನು ಮನಗಂಡು ಜೇನುನೊಣಗಳ ಸಂತತಿಯನ್ನು ರಕ್ಷಿಸಿ ಪರಿಸರ ಸಮತೋಲನವನ್ನು ಕಾಪಾಡಬೇಕಾಗಿದೆ ಎಂದೂ ವಿದ್ಯಾಥಿ೯ಗಳು ತಮ್ಮ ಪ್ರಬಂಧದಲ್ಲಿ ಹೇಳಿದ್ದಾರೆ.