NEWS DESK : ಪ್ರೇಮಿಗಳಿಗೆ ಪವಿತ್ರವಾದ ದಿನ ಫೆ.14 ಈ ದಿನವನ್ನು ಪ್ರಪಂಚದಂದ್ಯಾತ ಪ್ರೇಮಿಗಳು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಈ ಪ್ರೀತಿ ಪ್ರೇಮ ಪ್ರಣಯಗಳಿಂದ ದೂರ ಇರಬೇಕೆಂದು ಮನಸ್ಸು ಹೇಳಿದ್ದರೂ ಫೆಬ್ರವರಿ ತಿಂಗಳು ಬರುತ್ತಿದ್ದಂತೆ, ಎಂದಿನಂತೆ ಹೃದಯದಲ್ಲಿ ಪ್ರಣಯದ ಹೂಗಳು ಅರಳಿಯೇ ಬಿಡುತ್ತದೆ. ಈ ದಿನ ಪ್ರೇಮಿಗಳ ಪಾಲಿನ ವರದಾನದ ದಿನವಾಗಿದ್ದು, ಈ ದಿನದಂದು ಪೇಮಿಗಳು ಅದೆಷ್ಟೋ ದಿನಗಳಿಂದ ತಮ್ಮ ಮನಸ್ಸಿನಲ್ಲಿ ಅದುಮಿಟ್ಟುಕೊಂಡಿರುವ ಭಾವನೆಗಳನ್ನು ತನ್ನ ಪ್ರಿಯಕರನೊಂದಿಗೆ ಅಥವಾ ಪ್ರೇಯಸಿಗೆ ತಿಳಿಸುವ ಅತ್ಯಮೂಲ ದಿನ.
ಈ ದಿನ ಪ್ರೀತಿ ಮಾನವ ಲೋಕದ ಅತ್ಯದ್ಭುತ ಶಕ್ತಿ ಪ್ರೀತಿ, ಎಂದರೆ ತಮ್ಮ ಹುಟ್ಟಿನಿಂದ ಸಾವಿನವರೆಗೂ ತಮ್ಮ ಜೊತೆಯಲ್ಲಿ ಇರಬೇಕಾದ ಅಮೂಲ್ಯವಾದ ಭಾವನೆ. ಇದರಲ್ಲಿ ಮಹಾ ಶಕ್ತಿಯೇ ಆಡಗಿದೆ. ಪ್ರೀತಿ, ವಾತ್ಯಲ್ಸ, ಇಷ್ಟ, ಕಾಳಜಿ, ಕರುಣೆ ಎಲ್ಲವೂ ಪ್ರೀತಿಯಲ್ಲಿ ಅಡಗಿದೆ. ಇದು ಒಂದು ಮಹಾಸಾಗರವೆ ಆಗಿರುತ್ತದೆ.
ಪ್ರೀತಿಯ ಸಂಕೇತ ಕೆಂಪು ಬಣ್ಣ, ಅದರಲ್ಲೂ ಕೆಂಪು ಗುಲಾಬಿ ವಿಶೇಷ, ಪ್ರೇಮಿಗಳು ತಮ್ಮ ಹೃದಯದಲ್ಲಿರುವ ಪ್ರೀತಿಯನ್ನು ಅಥವಾ ಮನಸ್ಸಿನ ಭಾವನೆಗಳನ್ನೂಆ ದಿನ ಕೆಂಪು ಗುಲಾಬಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಮನಸ್ಸಿನ ಭಾವನೆಗಳನೂ ಪ್ರಿಯಕರ ಅಥವಾ ಪ್ರೇಯಸಿಗೆ ಗುಲಾಬಿಯನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆಲ್ಲದೆ ಈ ದಿನವನ್ನು ವಿವಿಧ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ತಮ್ಮಲ್ಲಿರುವ ಪ್ರೀತಿಯ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಆ ಕ್ಷಣವನ್ನು ಮರೆಯಲಾಗದ ಕ್ಷಣಗಳಂತೆ ಕಳೆಯುತ್ತಾರೆ. ಕೆಲವು ಸಂಬಂಧಗಳು ಆ ಪರಶಿವನೇ ಖುದ್ದಾಗಿ ನಿಂತು ಹೋಗುತ್ತಿರುವುದನ್ನು ನಾವುಗಳು ಕಾಣಬಹುದು. ಶುದ್ಧವಾದ ನೈಮಲ್ಯವಾದ ಪ್ರಣಯವು ನಮ್ಮ ಜೀವನದ ಪುಣ್ಯಗಳಲ್ಲಿ ಒಂದಾಗಿದು ಅದನ್ನು ಅನುಭವಿಸುವುದೆ ಭಾಗ್ಯ. ಪ್ರೇಮಕ್ಕೆ ಕಣ್ಣಿಲ್ಲ, ಜಾತಿ ಮತ ಬೇಕಾಗಿಲ್ಲ ಮನಸೊಂದಿದ್ದರೆ ಸಾಕು.
ಪ್ರಸ್ತುತ ಸನ್ನಿವೇಶದಲ್ಲಿ ಮೊಬೈಲ್ ಎಂಬ ವಸ್ತುವಿನಿಂದ ಪ್ರೀತಿ ಪ್ರೇಮ ಹೇಗೆ ಬಾರುತ್ತೇ! ಹೇಗೆ ಹೋಗುತ್ತೇ? ಎಂಬುವುದು ತಿಳಿಯದಾಗಿದೆ. ಆಧುನಿಕತೆಗೆ ತಕ್ಕಂತೆ ಪ್ರೇಮ ಕೂಡ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇದರ ಬಗ್ಗೆ ಹಲವಾರು ಉದಾರಣೆಗಳು ನಮ್ಮ ಕಣ್ಣ ಮುಂದೆ ಇದೆ. ಇದರಿಂದ ಅದೆಷ್ಟೋ ಪ್ರೇಮಿಗಳು ಮೋಸಕ್ಕೆ ಬಲಿಯಾಗುತ್ತಿರುವುದನ್ನು ನಾವುಗಳು ಕಾಣುತ್ತಿದ್ದೇವೆ. ಪ್ರೀತಿಯು ಗೆಲುವಿಗೆ ಮುಖ್ಯ ಪಾತ್ರವಹಿಸುವುದು. ವಿಶ್ವಾಸ, ನಿಜವಾದ ಪ್ರೀತಿಯಲ್ಲಿ ಅವಕಾಶವಿರುವುದು ಸ್ನೇಹಕ್ಕೆ ಮಾತ್ರ
ಪ್ರತಿ ಪ್ರೇಮಿಗಳು ಜೀವನ ಪರಿಯಂತ ಜೊತೆಯಾಗಿ ಬಾಳಬೇಕೆಂಬ ಬಯಕೆಯನ್ನು ಹೊಂದಿರುತ್ತಾರೆ ಪರಸ್ಪರ ಜೊತೆಯಾಗಿ ಈ ನಿರ್ಧಾರವನ್ನು ಕೈಗೊಳ್ಳುವ ದಿನವು ಪ್ರೇಮಿಗಳ ದಿನಾಚರಣೆಯಲ್ಲಿ ಅಡಗಿದೆ ಎಂದರೆ ಸುಳ್ಳಾಗದು. ಈ ದಿನವನ್ನು ತನ್ನ ಪ್ರೀತಿಯ ಹೃದಯದೊಡಯನಿಗೆ ಅಥವಾ ಹೃದಯದೊಡತಿಗೆ ವ್ಯಕ್ತ ಪಡಿಸುವ ದಿನ ಹಾಗೂ ಜೀವನ ಸಂಗತಿಯನ್ನು ಆಯ್ದುಕೊಳ್ಳುವ ದಿನವಾಗಿದೆ. ನೈಜ ಪ್ರೀತಿಗೆ ಅಂತ್ಯ ಎಂಬುವುದೆ ಇಲ್ಲ ಪ್ರೀತಿಯಲ್ಲಿ ನಂಬಿಕೆ ಇಟ್ಟವರಿಗೆ ಮೀಸಲಾಗಿರುವ ಈ ದಿನದಲ್ಲಿ ಪ್ರೀತಿಗೊಂದು ಅರ್ಥವಿರಬೇಕು, ಇದ್ದರೆ ಮಾತ್ರ ಪ್ರೀತಿ ಶಾಶ್ವತ, ಪ್ರೇಮಿಗಳಾದ ನಾವುಗಳು ಈ ದಿನವನ್ನು ಸಂಭ್ರಮದಿಂದ ಆಚರಿಸೋಣ ಎಲ್ಲ ಪ್ರೇಮಿಗಳಿಗೂ ಪ್ರೇಮಿಗಳ ದಿನದ ಶುಭಾಶಯಗಳು.
ಲೇಖನ : ಪಿ.ಪಿ.ಸುಕುಮಾರ (ಹಾಕತ್ತೂರು)