ಮಡಿಕೇರಿ ಮಾ.2 NEWS DESK : ವಿರಾಜಪೇಟೆ ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.
ಬಿಟ್ಟಂಗಾಲ ಪಂಚಾಯಿತಿಯ ಪೋದಕೇರಿ ಮಹಾದೇವರ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಬೇಟೊಳಿ ಪಂಚಾಯಿತಿಯ ಗುಂಡಿಗೆರೆ ಮಸೀದಿಗೆ ತೆರಳುವ ನೂತನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಗೋಣಿಕೊಪ್ಪದ ಶ್ರೀ ಗಣೇಶ್ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಶುಭ ಕೋರಿದರು.
ಇದೇ ಸಂದರ್ಭ ಬೇಟೊಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಚಿಣ್ಣರ ಜೊತೆ ಸಮಯ ಕಳೆದು ಶಾಲೆಯ ಅಡಳಿತ ವೈಖರಿಯನ್ನ ಶ್ಲಾಘೀಸಿದರು.








