ವಿರಾಜಪೇಟೆ ಮಾ.16 NEWS DESK : ವರ್ಷಂ ಪ್ರತಿ ನಡೆಸಿಕೊಂಡು ಬರುತ್ತಿರುವ ಶ್ರೀ ಮುತ್ತಪ್ಪನ್ ದೇವರ ವಾರ್ಷಿಕ ತೆರೆ ಮಹೋತ್ಸವ ವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ವಿರಾಜಪೇಟೆ ನಗರದ ಹೊರ ವಲಯದ ಮಡಿಕೇರಿ ರಸ್ತೆಗೆ ಹೊಂದಿಕೊಂಡಿರು ಕುಕ್ಲೂರು ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮಾ.10 ರಂದು ಆರಂಭಗೊಂಡ ತೆರೆ ಮಹೋತ್ಸವವು ಬಸುರೀಮಾಲ ತೆರೆಯ ಮೂಲಕ ತೆರೆ ಕಂಡಿತು.
ಮುತ್ತಪ್ಪನ್ ವೆಳ್ಳಾಟಂ, ನಂತರ ಶ್ರೀ ಶಾಸ್ತಪ್ಪ ವೆಳ್ಳಾಟಂ, ಗುಳಿಗ ವೆಳ್ಳಾಟಂ, ಪ್ರಮುಖ ಆಕರ್ಷಣೆ ಯಾದ ಬಸುರಿಮಾಲ ವೆಳ್ಳಾಟಂ, ಕರಿಂಗುಟ್ಟಿ ಶಾಸ್ತಪ್ಪನ್ ವೆಳ್ಳಾಟಂ, ನಡೆಯಿತು.
ನಂತರ ಗುಳಿಗನ ತೆರೆ, ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ, ಶಾಸ್ತಪ್ಪನ್ ತೆರೆ, ಕರಿಂಗುಟ್ಟಿ ಶಾಸ್ತಪ್ಪನ್ ತೆರೆ, ವೆಳ್ಳಾಟಂ ಬಸುರಿಮಾಲ ತೆರೆ ನಡೆಯಿತು. ಇದೇ ಸಂದರ್ಭ ಜರುಗಿದ ದೈವನರ್ತ ವಿಶೇಷವಾಗಿತ್ತು.
ಎರಡು ದಿನಗಳು ನಡೆದ ವಾರ್ಷಿಕ ತೆರೆ ಮಹೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಭಕ್ತರಿಗೆ ಅನ್ನದಾನ ನಡೆಯಿತು.
ಮಹೋತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಕುಕ್ಲೂರು ಗ್ರಾಮಸ್ಥರು, ನಗರ ಸೇರಿದಂತೆ ಸ್ಥಳಿಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









