ನಾಪೋಕ್ಲು ಮಾ.18 : ಜಿಲ್ಲೆಯ ಖಾಸಗಿ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖ ಕೊಳ್ಳುತ್ತಿದ್ದು ಮುಚ್ಚುವ ಹಂತಕ್ಕೆ ಬಂದಿವೆ. ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದ್ದರೂ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಶಾಲೆಯನ್ನು ಮುನ್ನಡೆಸಲು ಸಾಧ್ಯವಾಗದಿದ್ದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ತಕ್ಷಣ ರಾಜೀನಾಮೆ ಕೊಡಲಿ ಎಂದು ಸ್ಥಳೀಯರಾದ ನೆರವಂಡ ಉಮೇಶ್ ಒತ್ತಾಯಿಸಿದರು.
ಗ್ರಾಮದ ನೇತಾಜಿ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಳೆ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
ಬಲಮಾವಟಿ ಗ್ರಾಮದಲ್ಲಿರುವ ನೇತಾಜಿ ಕೇಂದ್ರ ವಿದ್ಯಾಸಂಸ್ಥೆಯ ಜಾಗವನ್ನು ಮತ್ತೊಂದು ಖಾಸಗಿ ಸಂಸ್ಥೆಗೆ ಪರಭಾರೆ ಮಾಡಲು ಗುಟ್ಟಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು ನೇತಾಜಿ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಯಾರ ಗಮನಕ್ಕೂ ತಾರದೆ ಏಕಪಕ್ಷಿಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಶಾಲೆಯನ್ನು ಮುಚ್ಚಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಪ್ರಶ್ನಿಸಿದರು. ಶಾಲೆಯ ಹಳೆ ಕಟ್ಟಡ ದುಸ್ಥಿತಿಯಲ್ಲಿದೆ. ಈ ಕಟ್ಟಡದಲ್ಲಿ 25 ಕಾರ್ಮಿಕರಿಗೆ ತoಗಲು ಶಾಲಾ ಆಡಳಿತ ಮಂಡಳಿ ಅವಕಾಶ ನೀಡಿದೆ. ಇಂತಹ ಘಟನೆಗಳು ವಿರುದ್ಧ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ .ಶಾಲೆಯಲ್ಲಿ 10 ಎಕರೆ ಸ್ಥಳವಿದ್ದು ಕಾಫಿ, ಕಾಳು ಮೆಣಸು ಬೆಳೆಯಲಾಗುತ್ತಿದೆ. ಆದರೂ ಶಾಲೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವ ಆಡಳಿತ ಮಂಡಳಿ ಶಾಲೆ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ತೆರಳಲಿ ಎಂದು ಸರ್ವರು ಒತ್ತಾಯಿಸಿದರು.
ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮಸ್ಥರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು,
ಮಾದೆಯಂಡ ರಾಜ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ನಿವೃತ್ತ ಶಿಕ್ಷಕ ಪಾಲೆಯಡ ಕಾಳಪ್ಪ, ಚಂಗೇಟಿರ ಜೋಯಪ್ಪ, ಮೂವೆರ ಸುಬ್ರಮಣಿ, ಚಂಗೇಟಿರ ಲಕ್ಷ್ಮಣ, ಚಂಗೇಟಿರ ಅಚ್ಚಯ್ಯ ,ಚಂಗೇಟಿರ ಕುಮಾರ ಸೋಮಣ್ಣ,ಗ್ರಾಮ ಪಂಚಾಯಿತಿ ಸದಸ್ಯ ಮಚುರ ರವೀಂದ್ರ ,ಮಣವಟ್ಟಿರ ದಯಾ ಚಿನ್ನಪ್ಪ , ಮೊವೇರ ರೇಖಾಪ್ರಕಾಶ್, ಬೊಟ್ಟೋಲ೦ಡ ಜಾನಕಿ ಮಂದಣ್ಣ ,ತೋಲಂಡ ದೇವಯ್ಯ, ಅಪ್ಪಚೆಟ್ಟೋಳoಡ ಮಾಚಯ್ಯ, ಕೈಬುಲಿರ ಗಣಪತಿ ಪಾಲೆಯಡ ನಿರ್ಮಲ ಅಯ್ಯಪ್ಪ, ಚಿರೋಟಿರ ಮುತ್ತಣ್ಣ, ಚಂಗೆಟಿರ ಅಪ್ಪಣ್ಣ, ತಾಪ0ಡ ಅಪ್ಪಣ್ಣ, ಚಂಗೇಟಿರ ಕುಶಾಲಪ್ಪ, ಪಳಂಗೋಟು ಹನೀಫ್, ಚಂಬಾರ0ಡ ಜುಬೇರ್ ಮತ್ತಿತರರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.