ವಿರಾಜಪೇಟೆ ಮಾ.22 NEWS DESK : ವಿರಾಜಪೇಟೆಯ ಚಿನ್ನ, ಬೆಳ್ಳಿ ವರ್ತಕರು ಮತ್ತು ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆಯು ಮಾ.24 ರಂದು ನಡೆಯಲಿದೆ.
ಬಿಟ್ಟಂಗಾಲದ ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಪಿ.ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಚಿನ್ನ-ಬೆಳ್ಳಿ ವರ್ತಕರು ಮತ್ತು ಕೆಲಸಗಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಕೆ.ಶ್ರೀನಿವಾಸ, ವಿರಾಜಪೇಟೆ ತಾಲ್ಲೂಕು ಚಿನ್ನ-ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ಉಪಧ್ಯಕ್ಷ ಉಲ್ಲಾಸ್ ಶೇಟ್, ಪ್ರಧಾನ ಕಾರ್ಯದರ್ಶಿ ಎ.ಪಿ.ಲೋಕೇಶ್, ಸಹ ಕಾರ್ಯದರ್ಶಿ ವಿ.ವಿ.ಜಿತೇಂದ್ರ, ಖಜಾಂಚಿ ಎ.ಎನ್.ದಶರಥ ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಕುಟುಂಬ ವರ್ಗದವರಿಗೆ ಸಂಗೀತ ಕುರ್ಚಿ, ಮಹಿಳೆಯರಿಗೆ ಮಕ್ಕಳಿಗೆ, ಪುರುಷರಿಗೆ, ಬಣ್ಣದ ರಂಗೋಲಿ ಸ್ಪರ್ಧೆಗಳು ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿ : ಕಿಶೋರ್ ಕುಮಾರ್ ಶೆಟ್ಟಿ





































