ಮಡಿಕೇರಿ ಮಾ.22 NEWS DESK : ಯಾವುದೇ ದಾಖಲೆಗಳಿಲ್ಲದೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 4 ಲಕ್ಷ ರೂ.ಗಳನ್ನು ಕುಶಾಲನಗರದ ಕೊಪ್ಪದಲ್ಲಿರುವ ವಾಹನ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಟಿಬೆಟಿಯನ್ ನಿರಾಶ್ರಿತ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಲಿ ಬೈಲುಕೊಪ್ಪದಿಂದ ಕುಶಾಲನಗರ ಪಟ್ಟಣದ ಕಡೆಗೆ ಹಣ ಸಾಗಿಸುತ್ತಿದ್ದ ಸಂದರ್ಭ ಅಧಿಕಾರಿಗಳು ಪತ್ತೆಹಚ್ಚಿ ಕ್ರಮ ಕೈಗೊಂಡಿದ್ದಾರೆ.
ಕೇಂದ್ರದ ಚುನಾವಣಾ ಅಧಿಕಾರಿ ಪೂವಯ್ಯ, ಮಹಾದೇವ್, ಅಭಿಷೇಕ್, ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಬಿ.ಎಸ್.ಉಮಾ, ಸಿಬ್ಬಂದಿಗಳಾದ ಅರುಣ್ ಕುಮಾರ್, ಶಶಿಕುಮಾರ್ ಹಾಗೂ ಜಯಪ್ರಕಾಶ್ ಈ ಸಂದರ್ಭ ಇದ್ದರು.









