ಮಡಿಕೇರಿ ಮಾ.27 NEWS DESK : ವಿಶ್ವ ಹಿಂದೂ ಪರಿಷತ್ ಕೊಡಗು ಘಟಕ, ಬನಶಂಕರಿ ಘಟಕ ಮತ್ತು ರಾಜರಾಜೇಶ್ವರಿ ನಗರ ಶ್ರೀ ರಾಯರ ಮಠದ ಪ್ರಮುಖರು ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿದರು. ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀ ಕಾವೇರಿ ಮಾತೆಗೆ ಬೆಳ್ಳಿಯ ಬಾಗಿನವನ್ನು ಅರ್ಪಿಸಿದರು. ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಮಾತನಾಡಿ, ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಜನರು ಮಳೆಯ ಅಭಾವದಿಂದ ನೀರಿಲ್ಲದೆ ಬರಗಾಲದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.ಈ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಕಾವೇರಿನದಿಯ ಉಗಮ ಸ್ಥಾನ ತಲಕಾವೇರಿಗೆ ಆಗಮಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಈ ಸಂದರ್ಭ ಭಜರಂಗದಳ ಪ್ರಾಂತ್ಯ ಸಂಯೋಜಕರಾದ ಪ್ರಪಂಚನ್, ವಿ.ಹಿಂ.ಪ. ಕೊಡಗು ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಕಾರ್ಯಾಧ್ಯಕ್ಷರಾದ ಸುರೇಶ್ ಮುತ್ತಪ್ಪ, ಸಹಕಾರ್ಯದರ್ಶಿ ಕೇತೀರ ಯತೀಶ್, ಭಜರಂಗದಳ ಜಿಲ್ಲಾ ಸಂಯೋಜಕರಾದ ಪ್ರವೀಣ್ ಸಿದ್ದಾಪುರ, ಸಹ ಸಂಯೋಜಕರಾದ ನವೀನ್ ಪೂಜಾರಿ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ರಿಶ್ತ ಚಂಗಪ್ಪ, ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಉಮಾವತಿ, ಜಿಲ್ಲಾ ಸಹ ಸಂಯೋಜಕಿ ಪೂರ್ಣಿಮಾ ಸುರೇಶ್, ಕೋಶಾಧ್ಯಕ್ಷರಾದ ಸಂಪತ್ ಸರಳಾಯ, ವಿ.ಹಿಂದೂ.ಪರಿಷತ್ತಿನ ಪೊನ್ನಂಪೇಟೆ ಪ್ರಖಂಡ ಅಧ್ಯಕ್ಷರಾದ ಪಂದ್ಯಂಡ ಹರೀಶ್, ಕಾರ್ಯದರ್ಶಿಯಾದ ಅಮ್ಮತ್ತೀರ ಸುರೇಶ್ ಮತ್ತು ಕಾರ್ಯಕರ್ತರು ಹಾಜರಿದ್ದರು.