ಸೋಮವಾರಪೇಟೆ ಮಾ.30 NEWS DESK : ಲೋಕಸಭಾ ಚನಾವಣೆಯ ಹಿನ್ನಲೆಯಲ್ಲಿ ಸೋಮವಾರಪೇಟೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಿತು.
ಪಟ್ಟಣದ ಖಾಸಗಿ, ಕೆ.ಎಸ್.ಆರ್.ಸಿ.ಮತ್ತು ಪಟ್ಟಣ ಪಂಚಾಯಿತಿ ಆವರಣದಲ್ಲಿ ರಂಗೋಲಿ ಸ್ಪರ್ಧೆ ನಡೆಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಇಲ್ಲಿನ ಪಟ್ಟಣ ಪಂಚಾಯ್ತಿ ವತಿಯಿಂದ ಭಾರತ ಚುನಾವಣಾ ಆಯೋಗದ ಆದೇಶದಂತೆ ಕರ್ನಾಟಕದಲ್ಲಿ ನಡೆಯಲಿರುವ ಲೋಕಸಭಾ ಉಪಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಹಾಗೂ ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಸಕ್ತಿ ಮೂಡಿಸುವ ಸಲುವಾಗಿ ಜಾಗೃತಿ ಮೂಡಿಸಲು ರಂಗೋಲಿ ಸ್ಪರ್ಧೆ ನಡೆಸಲಾಯಿತು.
ಸ್ಪರ್ದೆಯಲ್ಲಿ ಸಾಕಷ್ಟು ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿ ಚುನಾವಣೆ ಸಂಬಂದಿಸಿದ ರಂಗೋಲಿ ಹಾಗೂ ಘೋಷವಾಕ್ಯಗಳನ್ನು ಬರೆದರು.
ಈ ಸಂದರ್ಭ ಪ.ಪಂ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ನವೀನ್ ಕುಮಾರ್, ಮುಖ್ಯಧಿಕಾರಿ ಲೋಕ್ಯ ನಾಯಕ್, ಆರೋಗ್ಯ ನಿರೀಕ್ಷಕ ಜಾಸಿಂಖಾನ್, ಸಿಬ್ಬಂದಿಗಳಾದ ರೂಪ, ವನಿತಾ, ಹೊನಲಾ ದೇವಿ, ಆದಿಲ್ಪಾಶಾ ಹಾಗೂ ಮುಂತಾದವರು ಹಾಜರಿದ್ದರು.