ವಿರಾಜಪೇಟೆ ಏ.2 NEWS DESK : ಬೆಂಗಳೂರಿನ ಬಾಗಲಗುಂಟೆಯ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ವಿಶ್ವ ಕನ್ನಡ ಪ್ರಥಮ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನದಲ್ಲಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನೀಡಲಾಯಿತು.
ಇದೇ ಸಂದರ್ಭ ನೃತ್ಯ ಮಾಡಿದ ವಿದ್ಯಾರ್ಥಿಗಳಾದ ಧೃತಿ, ಲಾವಣ್ಯ, ತನುಗೋಪಿ, ತೇಜಸ್ವಿನಿ, ಲಿಪಿತ, ಚೈತನ್ಯ, ಟಿಯಾನ, ಭುವನ, ಲಕ್ಷ, ಸಂಚಿತ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.





































