Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಂತ ಜೊಸೆಫರ ಶಾಲೆಯಲ್ಲಿ ಸುರಕ್ಷತಾ ಕಾರ್ಯಕ್ರಮ*
  • *ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಜಿ.ಹಂಸ ಸಾಧನೆ*
  • *ವಿಶೇಷ ಚೇತನರಿಂದ ಅರ್ಜಿ ಆಹ್ವಾನ*
  • *ಬಲಮುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ*
  • *ಪಟ್ಟಣಕ್ಕೆ ಬಂದ ಕಾಡು ಕುರಿ*
  • *ಪ್ರಜಾಪ್ರಭುತ್ವ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಪ್ರತಿಯೊಂದು ಮತ ಅಮೂಲ್ಯ : ಶಾಸಕ ಎ.ಎಸ್.ಪೊನ್ನಣ್ಣ*
  • *ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನ*
  • *ಗಾಜಿನ ಸೇತುವೆ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ : ಪ್ರವಾಸಿಗರ ಸುರಕ್ಷತೆ ಗಮನಹರಿಸಿ ಮುಂದಿನ ಕ್ರಮ* 
  • *’ಕರ್ತವ್ಯ’ ಆಪ್ ನೋಂದಣಿ : ಮಾಧ್ಯಮ ವರದಿಗಳಿಗೆ ಸ್ಪಷ್ಟೀಕರಣ ನೀಡಿದ ಸರ್ಕಾರ :  ಶೇ.70.6 ರಷ್ಟು ಪ್ರಗತಿ ಸಾಧನೆ*
  • *ಕೊಡವರಿಗೆ ವಿಶೇಷ ಸ್ಥಾನಮಾನ : ಸಿಎನ್‌ಸಿಯಿಂದ ಜೂ.26ರಂದು ವಿಚಾರಗೋಷ್ಠಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕರ್ನಾಟಕದ ಕಡಲ ತೀರದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಇಡಗುಂಜಿ ವಿನಾಯಕ ದೇವಾಲಯ*
ಇತ್ತೀಚಿನ ಸುದ್ದಿಗಳು ಮಹಾದೇಗುಲ

*ಕರ್ನಾಟಕದ ಕಡಲ ತೀರದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಇಡಗುಂಜಿ ವಿನಾಯಕ ದೇವಾಲಯ*

ಏಪ್ರಿಲ್ 5, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು 1500 ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. 66 (ರಾ.ಹೆ. 17)ರಿಂದ 7 ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ “ಇಡಗುಂಜಿ ದೇವಸ್ಥಾನ” ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ಧ (ಗೋಕರ್ಣ, ಇಡಗುಂಜಿ, ಹಟ್ಟಿ ಅಂಗಡಿ, ಗುಡ್ಡಟು ಆನೆಗುಡ್ಡೆ, ಶರವು, ಸೌತಡ್ಕ) ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.

ವಿನಾಯಕ ಮೂರ್ತಿ :: 
ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ “ಮಹೋತಭಾರ ಶ್ರೀ ವಿನಾಯಕ” ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ “ದ್ವಿ ಭುಜ” ಭಂಗಿಯಲ್ಲಿ ಸುಮಾರು 88 ಸೆ.ಮೀ ಎತ್ತರ ಮತ್ತು 59 ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ಯನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ.

ಗಣೇಶ ಚತುರ್ಥಿ ::
ಪ್ರತಿವರ್ಷ ಚೌತಿ ಬಂದ್ರೆ ಸಾಕು, ಇಡಗುಂಜಿ ಕ್ಷೇತ್ರ ಕಳೆಗಟ್ಟುತ್ತದೆ. ಎಲ್ಲಿ ನೋಡಿದ್ರು ವಾಹನಗಳ ಸಾಲು, ಸಾಲು ಕಣ್ಣಿಗೆ ಕಾಣುತ್ತದೆ. ಇಲ್ಲಿ ಗಣೇಶ ಚತುರ್ಥಿಯಂದು ಲಕ್ಷಾಂತರ ಭಕ್ತರು ಆಗಮಿಸಿ, ವಿನಾಯಕನಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ ಎಲ್ಲರಿಗೂ ಇಡಗುಂಜಿ ಕ್ಷೇತ್ರವು ಪ್ರಮುಖ ಯಾತ್ರಾಸ್ಥಳವಾಗಿದ್ದು , ನಂಬಿ ಬಂದ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಲು ಗಣೇಶ ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ. ಈ ಬಾಲಗಣಪತಿಯ ಸನ್ನಿದಿಗೆ ಭಕ್ತರು ಪದೇ ಪದೇ ಆಗಮಿಸಿ ತಮ್ಮ ಹರಕೆ ಸಲ್ಲಿಸುವುದು ಈ ಕ್ಷೇತ್ರದ ಮಹಿಮೆಗೆ ನಿದರ್ಶನ.

ದೇವಸ್ಥಾನದ ಸಮಯ :: 
ದರ್ಶನ ಸಮಯ: ಮುಂಜಾನೆ 6:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯ ತನಕ ಮತ್ತು ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ 8:30 ರ ತನಕ
ಅಭಿಷೇಕದ ಸಮಯ: ಮುಂಜಾನೆ 6:00 ಗಂಟೆ, ಬೆಳಗ್ಗೆ 11:00 ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ 7:00 ಗಂಟೆಗೆ
ಪೂಜೆ ಸಮಯ:ಮುಂಜಾನೆ 8:00 ಗಂಟೆ, ಮಧ್ಯಾಹ್ನ 12:30 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ 8:00 ಗಂಟೆಗೆ
ಇಡಗುಂಜಿ ಮಹಾಗಣಪತಿಗೆ ಪ್ರತಿದಿನ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯುತ್ತಿದೆ. ಈ ಪೂಜೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಈ ವೇಳೆ ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಿ, ಪ್ರಾರ್ಥಿಸುತ್ತಾರೆ.

ವಿಶೇಷ ಸೇವೆಗಳು :: ತುಲಾಭಾರ,  ಗಣ ಹೋಮ, ಮೂಢ ಗಣಪತಿ, ರಂಗ ಪೂಜೆ

ತಲುಪುವುದು ಹೇಗೆ?
ರಸ್ತೆ ಮಾರ್ಗ: ಭಟ್ಕಳ ಮತ್ತು ಹೊನ್ನಾವರ ದಿಂದ ರಾ.ಹೆ. 66 (ರಾ.ಹೆ. 17)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ 32 ಕಿ.ಮೀ ಹಾಗೂ ಹೊನ್ನಾವರದಿಂದ 15 ಕಿ.ಮೀ ದೂರ.
ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ (ಕೊಂಕಣ ರೈಲ್ವೆ ) ಅಥವಾ ಮುರುಡೇಶ್ವರ (ಕೊಂಕಣ ರೈಲ್ವೆ ).
ಹತ್ತಿರದ ವಿಮಾನ ನಿಲ್ದಾಣ: ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸಂತ ಜೊಸೆಫರ ಶಾಲೆಯಲ್ಲಿ ಸುರಕ್ಷತಾ ಕಾರ್ಯಕ್ರಮ*

ಜೂನ್ 18, 2026

*ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಜಿ.ಹಂಸ ಸಾಧನೆ*

ಜೂನ್ 18, 2026

*ವಿಶೇಷ ಚೇತನರಿಂದ ಅರ್ಜಿ ಆಹ್ವಾನ*

ಜೂನ್ 18, 2026

*ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಜಿ.ಹಂಸ ಸಾಧನೆ*

ಜೂನ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜೂ.18 NEWS DESK : ರಾಷ್ಟ್ರೀಯ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್ (ಎನ್‍ಎಂಎಂಎಸ್) ಪರೀಕ್ಷೆಯಲ್ಲಿ ಕೊಡ್ಲಿಪೇಟೆಯ ಜಿ.ಹಂಸ ಉತ್ತೀರ್ಣಳಾಗಿ…

*ವಿಶೇಷ ಚೇತನರಿಂದ ಅರ್ಜಿ ಆಹ್ವಾನ*

ಜೂನ್ 18, 2026

*ಬಲಮುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ*

ಜೂನ್ 18, 2026

*ಪಟ್ಟಣಕ್ಕೆ ಬಂದ ಕಾಡು ಕುರಿ*

ಜೂನ್ 18, 2026

*ಪ್ರಜಾಪ್ರಭುತ್ವ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಪ್ರತಿಯೊಂದು ಮತ ಅಮೂಲ್ಯ : ಶಾಸಕ ಎ.ಎಸ್.ಪೊನ್ನಣ್ಣ*

ಜೂನ್ 18, 2026

*ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನ*

ಜೂನ್ 18, 2026

*ಗಾಜಿನ ಸೇತುವೆ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ : ಪ್ರವಾಸಿಗರ ಸುರಕ್ಷತೆ ಗಮನಹರಿಸಿ ಮುಂದಿನ ಕ್ರಮ* 

ಜೂನ್ 18, 2026

*’ಕರ್ತವ್ಯ’ ಆಪ್ ನೋಂದಣಿ : ಮಾಧ್ಯಮ ವರದಿಗಳಿಗೆ ಸ್ಪಷ್ಟೀಕರಣ ನೀಡಿದ ಸರ್ಕಾರ :  ಶೇ.70.6 ರಷ್ಟು ಪ್ರಗತಿ ಸಾಧನೆ*

ಜೂನ್ 18, 2026

*ಕೊಡವರಿಗೆ ವಿಶೇಷ ಸ್ಥಾನಮಾನ : ಸಿಎನ್‌ಸಿಯಿಂದ ಜೂ.26ರಂದು ವಿಚಾರಗೋಷ್ಠಿ*

ಜೂನ್ 18, 2026

*ಮಡಿಕೇರಿಯಲ್ಲಿ ಯೋಗಭಾರತಿಗೆ ರಜತ ಮಹೋತ್ಸವದ ಸಂಭ್ರಮ : ಯೋಗಪಟುಗಳಿಂದ ಯೋಗಪ್ರದಶ೯ನ : ಶಾಲೆಗಳಲ್ಲಿ ಯೋಗಭ್ಯಾಸ ಕಡ್ಡಾಯ ಮಾಡಬೇಕು : ಜಿ.ಚಿದ್ವಿಲಾಸ್ ಸಲಹೆ*

ಜೂನ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.