Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *‘ವಿಶ್ವ ಶ್ರವಣ ದಿನ’ ಪ್ರಯುಕ್ತ ಬೀದಿ ನಾಟಕದ ಮೂಲಕ ಜಾಗೃತಿ*
  • *ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ(ಕೈವಾರ ತಾತಯ್ಯ)*
  • *ಸಂಸದರಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಪುಸ್ತಕ ಬಿಡುಗಡೆ*
  • *ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿ ಸಭೆ*
  • *ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕೊಡಗು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕೊಡಗು*
  • *ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಕುಮಾರಸ್ವಾಮಿ-ಸಿದ್ದರಾಮಯ್ಯ ಸಾಥ್: ಮೂರು ದಿನಗಳ ಬಳಿಕ ಬೆಂಗಳೂರಿನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರಯಾಣಿಕರು*
  • *ಹಳೆಯ ಮೀಸಲಾತಿ ನಿಯಮಗಳಂತೆ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ*
  • *ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ*
  • *ಕೊಡಗು ಪೊಲೀಸ್ ಶ್ವಾನ ದಳಕ್ಕೆ ಶ್ವಾನ ಕೊಡುಗೆ ನೀಡಿದ ಎ.ಯು.ಪೂವಯ್ಯ*
  • *ತೋಳುರುಶೆಟ್ಟಳ್ಳಿಯಲ್ಲಿ ಅಗ್ನಿ ಅವಘಡ : ಸಿ ಆರ್ ಪಿ ಎಫ್ ಯೋಧ ಸಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಯದುವೀರ್ ಒಡೆಯರ್ ಪರಿಚಯ : ರಾಜಪರಂಪರೆಗೆ ಚ್ಯುತಿ ಬಾರದಂತೆ ಜನಸೇವೆ ಮತ್ತು ಸಮಾಜಸೇವೆ ಮಾಡುವುದೇ ನನ್ನ ಗುರಿ*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

*ಯದುವೀರ್ ಒಡೆಯರ್ ಪರಿಚಯ : ರಾಜಪರಂಪರೆಗೆ ಚ್ಯುತಿ ಬಾರದಂತೆ ಜನಸೇವೆ ಮತ್ತು ಸಮಾಜಸೇವೆ ಮಾಡುವುದೇ ನನ್ನ ಗುರಿ*

ಏಪ್ರಿಲ್ 19, 20244 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.19 NEWS DESK : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಾರತದ ರಾಜಮನೆತನಗಳಲ್ಲಿ ಪ್ರತಿಷ್ಠಿತವಾದ ಮೈಸೂರು ರಾಜವಂಶಸ್ಥ ಕುಟುಂಬದವರು. ಮೈಸೂರಿನ ಹೆಸರಾಂತ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಮರಿ ಮೊಮ್ಮಗನಾಗಿರುವ ಯದುವೀರ್ ಮೈಸೂರಿನ ಮಹಾರಾಜ ಎಂದೇ ರಾಜಮನೆತನದಲ್ಲಿ, ಜನಮಾನಸದಲ್ಲಿ ಖ್ಯಾತಿ ಪಡೆದಿದ್ದಾರೆ.
ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಯದುವೀರ್ ತರುವಾಯ ಕೆನಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶಿಕ್ಷಣ ಪಡೆದು, ಅಮ್ ರೆಸ್ಟ್ ನ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಇತಿಹಾಸ ಮತ್ತು ಎಕಾನಾಮಿಕ್ಸ್ ನಲ್ಲಿ ಪದವಿ ಪಡೆದಿದ್ದಾರೆ.
ತನ್ನ 23 ನೇ ವಯಸ್ಸಿನಲ್ಲಿಯೇ ಮೈಸೂರು ರಾಜಮನೆತನದ 27ನೇ ಮಹಾರಾಜರಾಗಿ ಅಧಿಕಾರ ಪಡೆದ ಯದುವೀರ್ ಅಂದಿನಿಂದ ಇಂದಿನವರೆಗೂ ರಾಜಪರಂಪರೆಗೆ ಚ್ಯುತಿ ಬಾರದಂತೆ ಜನಸೇವೆ ಮತ್ತು ಸಮಾಜಸೇವೆ ಮಾಡಿಕೊಂಡು ಬಂದಿದ್ದಾರೆ. ವಿಶ್ವವಿಖ್ಯಾತವಾಗಿರುವ ಮೈಸೂರು ದಸರಾ ಖಾಸಗಿ ದರ್ಬಾರ್ ನ್ನು 2015 ರಿಂದಲೂ ಯದುವೀರ್ ಪರಂಪರೆಗೆ ದಕ್ಕೆ ಬಾರದಂತೆ ನಿರ್ವಹಿಸಿಕೊಂಡು ಬಂದಿರುವುದು ಕೂಡ ಈ ತರುಣನ ಚಾಕಚಕ್ಯತೆಗೆ ಉದಾಹರಣೆಯಾಗಿದೆ.
ಯದುವೀರ್ ಅವರು ರಾಜಾಸ್ತಾನದ ಪ್ರತಿಷ್ಠಿತ ದುಂಗನ್ ಪುರ್ ರಾಜಮನೆತನದ ಹರ್ಷವರ್ಧನ್ – ಮಹೇಶ್ರೀ ಕುಮಾರಿ ದಂಪತಿಯ ಪುತ್ರಿ ತ್ರಿಷಿಕಾ ಅವರನ್ನು ಮದುವೆಯಾದರು. ಈ ದಂಪತಿಗೆ ಆದ್ಯವೀರ್ ನರಸಿಂಹರಾಜ ಒಡೆಯರ್ ಎಂಬ 7 ವರ್ಷದ ಪುತ್ರನಿದ್ದಾನೆ.
ಸಾಂಸ್ಕೃತಿಕ ನಗರವಾಗಿ ಕಂಗೊಳಿಸುತ್ತಿರುವ ಅರಮನೆಯ ವೈಭವದ ಮೈಸೂರು ಬಹಳ ವರ್ಷಗಳಿಂದಲೂ ಪ್ರಗತಿಯನ್ನು ಕಾಣುತ್ತಲೇ ಬಂದಿದೆ. ಮೈಸೂರು ಇಂದಿಗೂ ಭಾರತದ ಅತ್ಯಂತ ವ್ಯವಸ್ಥಿತ ನಗರವಾಗಿ ಗುರುತಿಸಲ್ಪಟ್ಟಿದೆ. ಇದಕ್ಕೆ ಮೈಸೂರನ್ನು ಆಳಿದ್ದ ರಾಜಮಹಾರಾಜರೇ ಮುಖ್ಯ ಕಾರಣ.
ರೈತರಿಗೆ ನೀರಿನ ಅನುಕೂಲಕ್ಕಾಗಿ ಕನ್ನಂಬಾಡಿ ಅಣೆಕಟ್ಟು ನಿರ್ಮಾಣ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕಿಸಲು ನೆರವಾಗುತ್ತಿರುವ ಮೈಸೂರು ಮಾರುಕಟ್ಟೆ, ಮೈಸೂರಿನ ಗಲ್ಲಿಗಲ್ಲಿಗೂ ಕುಡಿಯುವ ನೀರಿನ ಯೋಜನೆ, ಮೈಸೂರು ಮತ್ತು ಮೈಸೂರು ಪ್ರಾಂತ್ಯದಲ್ಲಿ ಸುಸಜ್ಜಿತ ರಸ್ತೆಗಳ ನಿರ್ಮಾಣ ಸೇರಿದಂತೆ ನೂರಾರು ಅಭಿವೃದ್ಧಿ ಯೋಜನೆಗಳನ್ನು ಅಂದಿನ ಕಾಲದಲ್ಲಿಯೇ ಮೈಸೂರು ರಾಜರು ಕಲ್ಪಿಸಿದ್ದರು.
::: ಅಭಿಪ್ರಾಯ :::
::: ಸುವರ್ಣ ಯುಗ :::
ಜನಹಿತಕ್ಕಾಗಿ ಮೈಸೂರು ಅರಸರು ಜಾರಿಗೊಳಿಸಿದ್ದ ಯೋಜನೆಗಳು ಇಂದಿಗೂ ಜನರಿಗೆ ಪ್ರಯೋಜನವಾಗುತ್ತಾ ಬಂದಿವೆ. ಮೈಸೂರು ರಾಜರ ಕಾಲದ ಆಡಳಿತ ಕನ್ನಡ ನಾಡಿನಲ್ಲಿ ಸ್ವರ್ಣ ಯುಗವನ್ನೇ ಸೃಷ್ಟಿಸಿತ್ತು. ಜನರು ನೆಮ್ಮದಿಯಾಗಿ ಜೀವಿಸುತ್ತಿದ್ದ ಸಂಭ್ರಮದ ಕಾಲ ಅದಾಗಿತ್ತು. ಇದೀಗ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಭಾರತದ ಸುವರ್ಣ ಯುಗಕ್ಕಾಗಿ ನಾನಾ ರೀತಿಯಲ್ಲಿ ಕಟಿಬದ್ಧರಾಗಿ ಅಪೂರ್ವ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದ್ದಾರೆ. ಮೋದಿಯವರ ಅದ್ಭುತ ಕನಸುಗಳು ಜಾರಿಗೊಳ್ಳುತ್ತಿರುವ ಪರಿಣಾಮವೇ ಭಾರತವನ್ನು ಜಗತ್ತು ನಿಬ್ಬೆರಗಾಗಿ ನೋಡುತ್ತಿದೆ. ಮೋದಿಯವರು ವಿಶ್ವಗುರುವಾಗಿ ಕಂಗೊಳಿಸುತ್ತಿದ್ದಾರೆ. 10 ವರ್ಷಗಳ ಆಡಳಿತ ಟ್ರಯಲ್ ಮಾತ್ರ. ಭಾರತದ ವಿಕಾಸದ ಸುವರ್ಣ ಯುಗ ತನ್ನ ಮೂರನೇ ಅವಧಿಯ ಆಡಳಿತದಲ್ಲಿ ಜಾರಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಇಂತಹ ಸುವರ್ಣ ಯುಗದ ಕನಸುಗಳ ಸಾಕಾರಕ್ಕೆ ಮೈಸೂರು- ಕೊಡಗು ಕ್ಷೇತ್ರದಿಂದ ಯದುವೀರ್ ಒಡೆಯರ್ ಅವರಂಥ ಅಪೂರ್ವ ಕನಸುಗಾರ ಮಾನವೀಯ ಗುಣವುಳ್ಳ ಹೃದಯವಂತ ಸಂಸದರಾಗಿ ಆಯ್ಕೆಯಾಗಲೇಬೇಕಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಹೇಳುತ್ತಾರೆ.
::: ವಿಶ್ವಗುರು :::
ಮೋದಿಯಂತಹ ವಿಶ್ವಗುರುವಿಗೆ ಯದುವೀರ್ ಅವರಂತಹ ಯುವ ನಾಯಕನ ಸಾಥ್ ಅಗತ್ಯವಾಗಿದೆ. ಹೀಗಾಗಿಯೇ ಮೈಸೂರು- ಕೊಡಗು ಕ್ಷೇತ್ರದಲ್ಲಿ ಯದುವೀರ್ ಒಡೆಯರ್ ಅವರನ್ನು ಗೆಲ್ಲಿಸಬೇಕು. ಆ ಮೂಲಕ ಕೇಂದ್ರದಲ್ಲಿ ಮೂರನೇ ಬಾರಿಗೆ ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಿ ತಮ್ಮ ಅದ್ಭುತವಾದ ಕನಸಿನ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಿ ಎನ್ನುವುದು ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ಬಹುತೇಕ ಜನರ ಅಭಿಲಾಷೆಯಾಗಿದೆ.
ರಾಜಮನೆತನದಲ್ಲಿ ಅತ್ಯಂತ ಸಂಸ್ಕಾರವಂತನಾಗಿ ಬೆಳೆದಿರುವ ಯದುವೀರ್ ಒಡೆಯರ್ ಸದಾ ಜನರ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಮೈಸೂರು ಮತ್ತು ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗಾಗಿ ತನ್ನ ಮುತ್ತಜ್ಜ, ಅಜ್ಜ, ತಂದೆ ಸೇರಿದಂತೆ ರಾಜವಂಶಸ್ಥರು ತೋರಿದ್ದ ಕಾಳಜಿ ಮತ್ತು ಜನಸೇವೆಯ ತುಡಿತ ಯದುವೀರ್ ಅವರಲ್ಲಿಯೂ ಇದೆ. ಅರಮನೆಗೆ ಮಾತ್ರ ಸೀಮಿತವಾಗದೇ ಕಳೆದ ಹಲವು ವರ್ಷಗಳಿಂದ ಮೈಸೂರು ಮತ್ತು ಕೊಡಗು ಜಿಲ್ಲೆಗಳಿಗೆ ತೆರಳಿ ಅಲ್ಲಿನ ಅಗತ್ಯತೆಗಳನ್ನು ಮನಗಂಡಿದ್ದ ಯದುವೀರ್ ಅವರು ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನಕ್ಕೆ ಮನ್ನಣೆ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾಗಿದ್ದಾರೆ. ಮೋದಿ ಅವರ ಇಚ್ಛೆಯಂತೆ ಯದುವೀರ್ ಇದೀಗ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರನ್ನು ಎಲ್ಲರೂ ಬೆಂಬಲಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ತೇಲಪಂಡ ಶಿವಕುಮಾರ್ ನಾಣಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
::: ನಾನೊಬ್ಬ ಸಾಮಾನ್ಯ ವ್ಯಕ್ತಿ :::
ತಾನೋರ್ವ ಸಾಮಾನ್ಯ ವ್ಯಕ್ತಿ, ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವುದು ನನ್ನ ಗುರಿಯಾಗಿದೆ. ಅರಮನೆಗೆ ಮಾತ್ರ ತಾನು ಸೀಮಿತವಾಗಿಲ್ಲ ಎಂದು ಹೇಳುವ ಯದುವೀರ್ ಅವರು, ಮೈಸೂರು- ಕೊಡಗು ಕ್ಷೇತ್ರದಲ್ಲಿ ಅನೇಕ ದೇವಾಲಯಗಳಿದ್ದು, ಇವುಗಳನ್ನು ಅಭಿವೃದ್ಧಿ ಪಡಿಸಲು ತನ್ನದೇ ಅರಮನೆಯಲ್ಲಿ ಪ್ರತ್ಯೇಕ ವಿಭಾಗವಿದೆ. ಈ ವಿಭಾಗದ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಜನ ಮುಂದಾಗಬೇಕೆಂದು ಕೋರಿದ್ದಾರೆ.
ಮೈಸೂರು ಅರಮನೆಗೆ ತಾನು ಸೀಮಿತನಾಗಿಲ್ಲ. ತನ್ನ ವಂಶಸ್ಥರು ಜನಸೇವೆಯನ್ನೇ ಹೇಗೆ ಜೀವನದ ಉದ್ದೇಶವಾಗಿರಿಸಿಕೊಂಡಿದ್ದರೋ ಅಂತೆಯೇ ತಾನೂ ಕೂಡ ಸಂಸದನಾಗಿ ಆಯ್ಕೆಯಾದರೆ ಜನಸೇವೆಗೆ ಆದ್ಯತೆ ನೀಡುತ್ತೇನೆ. ಸಂಸದನಾದಲ್ಲಿ ಯಾರೂ ಕೂಡ ತನ್ನನ್ನು ಕಾಣಲು ಕಷ್ಟ ಪಡಬೇಕಾಗಿಲ್ಲ. ತನ್ನದೇ ಪ್ರತ್ಯೇಕ ಕಛೇರಿ ತೆರೆದು ಅಲ್ಲಿ ಜನರಿಗೆ ಸುಲಭವಾಗಿ ಸಿಕ್ಕುವ ಮೂಲಕ ಜನರ ಸಮಸ್ಯೆ ಪರಿಹರಿಸಲು ಬದ್ಧನಾಗಿದ್ದೇನೆ ಎಂದು ಯದುವೀರ್ ಭರವಸೆ ನೀಡಿದ್ದಾರೆ.
ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಬಿಜೆಪಿ ಆಡಳಿತದಲ್ಲಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಕ್ರಾಂತಿಕಾರಿ ಪ್ರಗತಿ ಯೋಜನೆ ಜಾರಿಗೊಂಡಿದೆ. ಮುಂದಿನ ಹಂತದಲ್ಲಿ ಮತ್ತಷ್ಟು ಯೋಜನೆಗಳನ್ನು ಕ್ಷೇತ್ರವ್ಯಾಪ್ತಿ ಜಾರಿಗೊಳಿಸಲಿದ್ದೇನೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರ, ಶಿಕ್ಷಣ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಜೊತೆಗೆ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರದ ವಿಕಸಿತ ಭಾರತ ಯೋಜನೆಯನ್ನು ಬಳಸಿಕೊಂಡು ಕ್ರಾಂತಿಕಾರಿ ಪ್ರಗತಿ ಜಾರಿಗೊಳಿಸುತ್ತೇನೆ. ಜನ ಏನು ಬಯಸುತ್ತಾರೆಯೋ ಅದನ್ನು ಜನರ ಸೇವಕನಾಗಿ ಈಡೇರಿಸುವುದು ನನ್ನ ಧರ್ಮ. ರಾಜಮನೆತನದ ಬಗ್ಗೆ ಮೈಸೂರು – ಕೊಡಗಿನ ಜನತೆ ಸಾಕಷ್ಟು ಗೌರವ ಹೊಂದಿದ್ದಾರೆ. ಈ ಗೌರವಕ್ಕೆ ಚ್ಯುತಿ ಬಾರದಂತೆ ಜನರ ಸೇವಕನಾಗಿ ಕಾರ್ಯನಿರ್ವಹಿಸುವುದು ನನ್ನ ಜವಾಬ್ದಾರಿ ಕೂಡ ಆಗಿರುತ್ತದೆ. ಈ ಬಗ್ಗೆ ಸಂಶಯ ಬೇಡ ಎಂದೂ ಯದುವೀರ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ರಾಜರು, ಮಹಾರಾಜರ ಕಾಲ ಈಗಿಲ್ಲ. ಈಗ ಏನಿದ್ದರೂ ಪ್ರಜೆಗಳೇ ರಾಜರು ಎನಿಸಿಕೊಂಡ ಕಾಲ. ಈ ದಿನಗಳಲ್ಲಿ ತಾನು ಜನರ ಹೃದಯ ಗೆಲ್ಲುವ ಸಾಮ್ರಾಟನಾಗಿ ಜನರ ಕೆಲಸ, ಕಾರ್ಯ ನಿರ್ವಹಿಸಬೇಕು. ಇದಕ್ಕಾಗಿಯೇ ತಾನು ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದೇನೆ. ಪ್ರಜೆಗಳ ಮತದ ಆಶೀರ್ವಾದ ನನಗೆ ಮುಖ್ಯ ಎಂದು ಯದುವೀರ್ ಹೇಳಿಕೊಂಡಿದ್ದಾರೆ.
::: ಅಹಂ ಇಲ್ಲದ ವ್ಯಕ್ತಿ :::
32 ವರ್ಷದ ತರುಣ ಯದುವೀರ್ ಅವರ ಮನಸ್ಸಿನಲ್ಲಿ ಮೈಸೂರು- ಕೊಡಗು ಜಿಲ್ಲೆಗಳ ಸರ್ವಾಂಗೀಣ ಪ್ರಗತಿಯ ಬಗ್ಗೆ ಸಾಕಷ್ಟು ಕನಸುಗಳಿವೆ. ರಾಜಮನೆತನದವನು ಎಂಬ ಅಹಂ ಇಲ್ಲದೇ ಜನರೊಂದಿಗೆ ಬಿಸಿಲು ಗಾಳಿ, ಚಳಿ ಲೆಕ್ಕಿಸದೇ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಾ ಈಗಾಗಲೇ ಜನರ ಮನಸ್ಸು ಗೆದ್ದಿದ್ದಾರೆ. ಪ್ರತಿಷ್ಠಿತ ರಾಜಮನೆತನದ ಯುವಕ ಜನರ ಹೃದಯ ಸಾಮ್ರಾಟನಾಗಿ ವಿಜೃಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಸೋಮವಾರಪೇಟೆ ಮಂಡಲ ಬಿಜೆಪಿಯ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*‘ವಿಶ್ವ ಶ್ರವಣ ದಿನ’ ಪ್ರಯುಕ್ತ ಬೀದಿ ನಾಟಕದ ಮೂಲಕ ಜಾಗೃತಿ*

ಮಾರ್ಚ್ 3, 2026

*ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ(ಕೈವಾರ ತಾತಯ್ಯ)*

ಮಾರ್ಚ್ 3, 2026

*ಸಂಸದರಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಪುಸ್ತಕ ಬಿಡುಗಡೆ*

ಮಾರ್ಚ್ 3, 2026

*ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ(ಕೈವಾರ ತಾತಯ್ಯ)*

ಮಾರ್ಚ್ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಮಾ.03:-ಬಲಿಜ ಸಮಾಜದ ವಿದ್ಯಾರ್ಥಿಗಳ ಉದ್ಯೋಗದ ಅನುಕೂಲಕ್ಕಾಗಿ 2ಎ ಹಿಂದುಳಿದ ವರ್ಗದ ಮೀಸಲಾತಿ ನೀಡುವಂತಾಗಬೇಕು ಎಂದು ಯೋಗಿ…

*ಸಂಸದರಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಪುಸ್ತಕ ಬಿಡುಗಡೆ*

ಮಾರ್ಚ್ 3, 2026

*ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿ ಸಭೆ*

ಮಾರ್ಚ್ 3, 2026

*ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕೊಡಗು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕೊಡಗು*

ಮಾರ್ಚ್ 3, 2026

*ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಕುಮಾರಸ್ವಾಮಿ-ಸಿದ್ದರಾಮಯ್ಯ ಸಾಥ್: ಮೂರು ದಿನಗಳ ಬಳಿಕ ಬೆಂಗಳೂರಿನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರಯಾಣಿಕರು*

ಮಾರ್ಚ್ 3, 2026

*ಹಳೆಯ ಮೀಸಲಾತಿ ನಿಯಮಗಳಂತೆ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ*

ಮಾರ್ಚ್ 3, 2026

*ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ*

ಮಾರ್ಚ್ 3, 2026

*ಕೊಡಗು ಪೊಲೀಸ್ ಶ್ವಾನ ದಳಕ್ಕೆ ಶ್ವಾನ ಕೊಡುಗೆ ನೀಡಿದ ಎ.ಯು.ಪೂವಯ್ಯ*

ಮಾರ್ಚ್ 3, 2026

*ತೋಳುರುಶೆಟ್ಟಳ್ಳಿಯಲ್ಲಿ ಅಗ್ನಿ ಅವಘಡ : ಸಿ ಆರ್ ಪಿ ಎಫ್ ಯೋಧ ಸಾವು*

ಮಾರ್ಚ್ 3, 2026

*‘ಮುಕ್ಕಾಟಿರ ಕ್ರಿಕೆಟ್ ನಮ್ಮೆ’ಯ ವೆಬ್ ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆ ಉದ್ಘಾಟನೆ : ಅಮೋಘ ಕ್ರೀಡಾಸ್ಫೂರ್ತಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯ : ಡಾ.ಮಂಡೇಪಂಡ ಪುಷ್ಪ ಕುಟ್ಟಣ್ಣ ಅಭಿಪ್ರಾಯ*

ಮಾರ್ಚ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.