
ವಿರಾಜಪೇಟೆ ಏ.20 NEWS DESK : ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಇರ್ಪುವಿನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ಎನ್.ಎಸ್.ಎಸ್. ಸ್ವಯಂ ಸೇವಾ ವಿದ್ಯಾರ್ಥಿಗಳು ಇರ್ಪು ಶ್ರೀ ರಾಮೇಶ್ವರ ದೇವಸ್ಥಾನದ ಆವರಣ, ಹಿಂಭಾಗದ ನದಿ ಪ್ರದೇಶದ ಹಾಗೂ ಇರ್ಪು ಫಾಲ್ಸ್ ಬಳಿಯೂ ಸ್ವಚ್ಛ ಗೊಳಿಡಿದರು.
ಅಲ್ಲಲ್ಲಿ ಎಸೆದಿದ್ದ ಪ್ಲಾಸ್ಟಿಕ್, ಪೇಪರ್ಸ್, ನೀರಿನ ಬಾಟಲಿಗಳು ಮುಂತಾದ ಕಸವನ್ನು ತೆಗೆದರು. ವಿದ್ಯಾರ್ಥಿಗಳ ಈ ಸೇವಾ ಕಾರ್ಯವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಬಿ.ಬಿ.ಸುನಿಲ್ ಕುಮಾರ್, ಉಪನ್ಯಾಸಕರಾದ ಬೋಜಮ್ಮ, ಕನ್ನಿಕಾ, ಶ್ರೀಮಂಗಲದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಹಾಜರಿದ್ದರು. ಸುಮಾರು 60 ಎನ್.ಎಸ್.ಎಸ್. ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.








