
ಮಡಿಕೇರಿ ಏ.24 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭವು ಏ.26 ರಿಂದ ಮೇ 3ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಅಬೂಬಕ್ಕರ್ ಸಖಾಫಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯಿದ್ ಹಸನ್ ಸಖಾಫ್ ಅಲ್ ಹಳ್ರಮಿ(ರ) ಹಾಗೂ ಇತರ ಮಹಾನುಭಾವರ ಹೆಸರಿನಲ್ಲಿ ಎಮ್ಮೆಮಾಡಿನಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಉರೂಸ್ ಸಮಾರಂಭದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯನ್ನು ಅನುಸರಿಸಲಾಗುವುದೆಂದು ಹೇಳಿದರು.
ಏ.26 ರಂದು ಬೆಳ್ತಂಗಡಿ ದಾರುಸ್ಸಲಾಂ ಚೇರ್ಮೆನ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಅಬೂಬಕ್ಕರ್ ಸಖಾಫಿ ಧ್ವಜಾರೋಗಣದ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾತ್ರಿ 8 ಗಂಟೆಗೆ ಕೊಡಗು ನಾಇಬ್ ಖಾಝಿ ಅಬ್ದುಲ್ಲ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಮ್ಮೆಮಾಡು ಮುದರ್ರಿಸ್ ಹಂಝ ಸಖಾಫಿ ವಹಿಸಲಿದ್ದಾರೆ. ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ್ಲ ಪ್ರಶ್ನಂಙಳುಂ ಪರಿಹಾರವುಂ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.
ಏ.27 ರಂದು ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ (ಮುತ್ತನೂರ್ ತಂಙಳ್) ದ್ಸಿಕ್ರ್ ಹಲ್ಖಾ ಮತ್ತು ಮತ ಪ್ರವಚನ ನೇತೃತ್ವ ವಹಿಸಲಿದ್ದು, ಮುಳ್ಳೂರ್ಕೆರೆ ಮುಹಮ್ಮದ್ ಅಲಿ ಸಖಾಫಿ ಆಧುನಿಗ ಯುಗತ್ತಿಲ್ ಇಸ್ಲಾಮಿಂಡೆ ಪ್ರಶಸ್ವಿ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.
ಏ.28 ರಂದು ಮಗ್ರಿಬ್ ನಮಾಝಿನ ಬಳಿಕ ಖತಂ ದುಆ ಮಜ್ಲಿಸ್ ನಡೆಯಲಿದ್ದು, ಇದರ ನೇತೃತ್ವವನ್ನು ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ ಎಮ್ಮೆಮಾಡಿ (ಕಿಲ್ಲೂರ್ ತಂಙಳ್) ವಹಿಸಲಿದ್ದಾರೆ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ ಕುಟುಂಬ ಜೀವಿದಂ ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.
ಏ.29 ರಂದು ಸಾರ್ವಜನಿಕ ಸಮ್ಮೇಳನ ಜರುಗಲಿದ್ದು, ಸಯ್ಯಿದ್ ಮುಈನಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೋಶಾಧಿಕಾರಿ ಸಯ್ಯಿದ್ ಆಟಕೋಯ ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉದ್ಬೋಧನೆ, ಕರ್ನಾಟಕ ವಕ್ಫ್ ಮಂಡಳಿ ಮಾಜಿ ಚೆರ್ಮಾನ್ ಮೌಲಾನಾ ಶಾಫಿ ಸಅದಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ವಕ್ಫ್ ಮಂಡಳಿ ಸಚಿವ ಝಮೀರ್ ಅಹ್ಮದ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕರ್ನಾಟಕ ವಕ್ಫ್ ಮಂಡಳಿ ಚೆರ್ಮಾನ್ ಅನ್ವರ್ ಪಾಶ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾತ್ರಿ 8 ಗಂಟೆಗೆ ಮತಪ್ರವನ ಕಾರ್ಯಕ್ರಮ ನಡೆಯಲಿದ್ದು, ಶಮೀರ್ ದಾರಿಮಿ ಕೊಲ್ಲಂ “ವೃದ್ಧ ಸದನಂ ವಳರುನ್ನುಂಡೋ” ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಅನ್ನದಾನ ನೆರವೇರಲಿದ್ದು, ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಏ.30 ರಂದು ರಾತ್ರಿ 8.30 ಗಂಟೆಗೆ ವಹ್ಹಾಬ್ ನಈಮಿ ಕೊಲ್ಲಂ “ಯುವತ್ವಮೇ ವಿಜಯಂ ಇದಿಲೆ” ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.
ಮೇ 1 ರಂದು ಬೆಳಿಗ್ಗೆ 11 ಗಂಟೆಗೆ ದುಆಃ ಮಜ್ಲಿಸ್ ನಡೆಯಲಿದ್ದು, ಸಯ್ಯಿದ್ ಫಝಲ್ ಕೊಯಮ್ಮ ತಂಙಳ್ (ಕೂರ ತಂಙಳ್) ನೇತೃತ್ವ ವಹಿಸಲಿದ್ದಾರೆ. ರಾತ್ರಿ 8 ಗಂಟೆಗೆ ಮತಪ್ರವಚನ ಕಾರ್ಯಕ್ರಮ ನಡೆಯಲಿದ್ದು, ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ.
ಮೇ 2 ರಂದು ಮಗ್ರಿಬ್ ನಮಾಝಿನ ಬಳಿಕ ಸ್ವಲಾತ್ ಮಜ್ಲಿಸ್ ನಡೆಯಲಿದ್ದು, ಮುದರ್ರಿಸ್ ಎಮ್ಮೆಮಾಡು ಹಂಝ ಸಖಾಫಿ ಮಲಪ್ಪುರಂ ನೇತೃತ್ವ ವಹಿಸಲಿದ್ದಾರೆ. ಸಯ್ಯಿದ್ ಸಮೀಹ್ ಅನ್ವಾರಿ ಅಲ್ ಅಹ್ಸನಿ (ಮುದರ್ರಿಸ್ ಕೀಚೇರಿ) ದುಆಃ ನೆರವೇರಿಸಲಿದ್ದಾರೆ. ಎ.ಎಂ.ನೌಶಾದ್ ಬಾಖವಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮೇ 3 ರಂದು ಜುಮಾ ನಮಾಝಿನ ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವನ್ನು ಎರುಮಾಡ್ ತಂಙಳ್ ಸಯ್ಯಿದ್ ಇಲ್ಯಾಸ್ ಅಲ್ ಹೈದರೂಪಿ ಎಮ್ಮೆಮಾಡು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಅಬೂಬಕ್ಕರ್ ಸಖಾಫಿ ಪುದಿಯೋಡಿ ವಹಿಸಲಿದ್ದಾರೆ.
ವೇದಿಕೆಯಲ್ಲಿ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸದಸ್ಯ ಉಸ್ಮಾನ್ ಕಂಬೇರ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಬಿ.ಯು.ಅಶ್ರಫ್ ಮಾತನಾಡಿ, ಎಮ್ಮೆಮಾಡು ಮಖಾಂ ಉರೂಸ್ ಜಾತಿ ಮತ ಧರ್ಮಗಳನನ್ನು ಮೀರಿ ಜಿಲ್ಲೆ, ರಾಜ್ಯ, ಹೊರ ರಾಜ್ಯದ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿದ್ದು, ಈ ಬಾರಿಯ ಉರೂಸ್‍ನಲ್ಲಿ ನಾಡಿನ ವಿವಿಧೆಡೆಗಳಿಂದ ಹೆಚ್ಚಿನ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದಯ ಹೇಳಿದರು.
ಬರುವ ಭಕ್ತಾಧಿಗಳಿಗೆ ಹೋಟೆಲ್, ಅಂಗಡಿಗಳ ಮಾಲೀಕರು ತಾವು ಮಾರಾಟ ಮಾಡುವ ಆಹಾರ ಪದಾರ್ಥ, ನೀರು, ಘನ ತ್ಯಾಜ್ಯ ಪದಾರ್ಥಗಳು ತಿಂಡಿಗಳ ಬಗ್ಗೆ ಎಚ್ಚರ ವಹಿಸಿ, ಸೂಕ್ತ ರೀತಿಯಲ್ಲಿ ಸುಚಿತ್ವವನ್ನು ಕಾಪಾಡಿಕೊಂಡು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಆರೋಗ್ಯ ಇಲಾಖೆ, ಎಮ್ಮೆಮಾಡು ಗ್ರಾ.ಪಂ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿಗಳು ನಿಗವಹಿಸುತ್ತಿದ್ದು, ಅನಾಹುತ ಸಂಭವಿಸಿದ್ದಲ್ಲಿ ಹೊಟೇಲ್ ಹಾಗೂ ಅಂಗಡಿಗಳ ಮಾಲೀಕರೆ ನೇರ ಹೊಣೆ ಹೊರಬೇಕೆಂದು ಅಶ್ರಫ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್ ಸದಸ್ಯರಾದ ಉಸ್ಮಾನ್ ಕಂಬೇರ, ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.








