
ಸೋಮವಾರಪೇಟೆ ಏ.30 NEWS DESK : ಆಕಸ್ಮಿಕವಾಗಿ ಕಾಫಿತೋಟಕ್ಕೆ ಬೆಂಕಿ ತಗುಲು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಕಲ್ಕಂದೂರು ಗ್ರಾಮದಲ್ಲಿ ನಡೆದಿದೆ.
ಕಲ್ಕಂದೂರು ಗ್ರಾಮದ ಧನಂಜಯ ಎಂಬುವವರ ಕಾಫಿ ತೋಟಕ್ಕೆ ಬೆಂಕಿ ತಗುಲಿದ್ದು, ಸುಮಾರು ಎರಡು ಏಕರೆ ತೋಟ ಸುಟ್ಟು ಕರಕಲಾಗಿದೆ.
ಕಾಫಿ, ಮೆಣಸು ಮತ್ತು ಬಾಳೆ ಗಿಡಗಳು ಸುಟ್ಟುಹೋಗುತ್ತಿರುವುದನ್ನು ಗಮನಿಸಿದ ಪಕ್ಕದ ತೋಟದ ಕಾರ್ಮಿಕರು ತಕ್ಷಣ ಅಗ್ನಿಶಾಮಕ ಠಾಣೆಗೆ ದೂರು ನೀಡಿದ ಹಿನ್ನೆಲೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಯಶಸ್ವಿಯಾದರು.
ತೋಟದ ಮಾಲೀಕರು ನಷ್ಟವಾಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.








