
ಮೂರ್ನಾಡು ಮೇ 1 NEWS DESK : ಮೂರ್ನಾಡು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಡಾ. ಚೌರೀರ ಜಗತ್ ತಿಮ್ಮಯ್ಯ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಸಭೆಯಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಚೌರೀರ ಜಗತ್ ತಿಮ್ಮಯ್ಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳವರೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ನಂದೇಟ್ಟಿರ ಪಿ.ರಾಜ್ ಮಾದಪ್ಪ, ಕಾರ್ಯದರ್ಶಿಯಾಗಿ ಪೆಮ್ಮಡಿಯಂಡ ಎಂ. ವೇಣುಅಪ್ಪಣ್ಣ, ಖಜಾಂಚಿಯಾಗಿ ವಿ.ಎ.ಯತೀಶ್, ನಿರ್ದೇಶಕರುಗಳಾಗಿ ಈರಮಂಡಯು ಸೋಮಣ್ಣ, ಮುಂಡಂಡ ಕೆ. ನಂದಚೆಂಗಪ್ಪ, ಪುದಿಯೊಕ್ಕಡ ಎ. ಹರೀಶ್‍ದೇವಯ್ಯ, ಕೆರೆಮನೆ ಜಿ. ರಾಮಮೂರ್ತಿ ಮತ್ತು ಪಾಣತಲೆ ಟಿ.ಹರೀಶ್ ಆಯ್ಕೆಯಾಗಿದ್ದಾರೆ.
ವರದಿ : ಟಿ.ಸಿ.ನಾಗರಾಜ್, ಮೂರ್ನಾಡು







