


ವಿರಾಜಪೇಟೆ ಮೇ 2 : ವಿರಾಜಪೇಟೆ ನಗರದ ಶಕ್ತಿ ದೇವತೆ ರಾಜ ಬೀದಿಯಾಗಿರುವ ತೆಲುಗರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ಮಾರಿಯಮ್ಮ ದೇವಾಲಯದ ವಾರ್ಷಿಕ ಕರಗ ಮಹೋತ್ಸವವು ಮೇ 7 ರಿಂದ 11ರ ಆರಂಭವಾಗಲಿದೆ.
ಐದು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ.
ಮೇ 7 ರಂದು ದೇವಿಯ ಕರಗವನ್ನು ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮನ, ರಾತ್ರಿ ದೇವಾಲಯದಲ್ಲಿ ಮಾಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.
ಮೇ 8 ರಂದು ರಾತ್ರಿ 7 ಗಂಟೆಗೆ ತಂಬಿಟ್ಟು ಆರತಿ ಸೇವೆ ಮತ್ತು ವಿಶೇಷ ಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ. ಮೇ 9 ರಂದು ಮಧ್ಯಾಹ್ನ ಶ್ರೀ ದೇವಿಗೆ ವಿಶೇಷ ಅಲಂಕಾರ ಸೇವೆ, ಹರಿಕೆ ಸೇವೆಗಳು ಮತ್ತು ಮಾಹಾಪೂಜೆ, ಮಾಹಾ ಮಂಗಳಾರತಿ ನಡೆಯಲಿದ್ದು, ಬಳಿಕೆ ವಿಶೇಷ ಮಾಹಾ ಪ್ರಸಾದ ಜರುಗಲಿದೆ. ಮೇ 10 ರಂದು ತೆಲುಗರ ಬೀದಿ, ಜೈನರ ಬೀದಿ, ಎಫ್. ಎಂ.ಸಿ.ರಸ್ತೆ, ಖಾಸಗಿ ಬಸ್ಸು ನಿಲ್ದಾಣ ಜಂಕ್ಷನ್ ವರೆಗೆ ಸಂಚರಿಸಿ ದೇಗುಲಕ್ಕೆ ಹಿಂತಿರುಗಲಾಗುವುದು. ನಂತರ ದೇವಿಗೆ ಮಾಹಾಪೂಜೆ, ಪ್ರಸಾದ ವಿನಿಯೋಗದೊಂದಿಗೆ ಕರಗ ಮಹೋತ್ಸವ ಕ್ಕೆ ತೆರೆ ಕಾಣಲಿದೆ.
ಶ್ರೀ ದೇವಿಯ ವಾರ್ಷಿಕ ಕರಗ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಾಲಯ ಟ್ರಸ್ಟ್ ನ ಆಡಳಿತ ಮಂಡಳಿಯು ಮನವಿ ಮಾಡಿದೆ.










