
ನಾಪೋಕ್ಲು ಮೇ 3 NEWS DESK : ಭಾಗಮಂಡಲ ಸಮೀಪದ ಕೋರಂಗಾಲದ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮ ಕಳಶೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಬ್ರಹ್ಮ ಕಳಶೋತ್ಸವದ ಅಂಗವಾಗಿ ಗಣ ಹೋಮ, ದೇವರಿಗೆ ಅನುಜ್ಞಾನ ಕಳಸ , ಬಿಂಬಶುದ್ಧಿ, ನವಗ್ರಹ ಹೋಮ, ತತ್ವ ಹೋಮ, ತತ್ವ ಕಳಸ, ಜೀವ ಕಳಸ ಪ್ರತಿಷ್ಠೆ, ದುರ್ಗಾ ದೀಪ ನಮಸ್ಕಾರ ಪೂಜೆ, ಪ್ರಾಯಶ್ಚಿತ ಹೋಮ, ಆದಿವಾಸ ಹೋಮ, ಕಳಸ ಮಂಟಪ ಸಂಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ವೃಷಭ ಲಗ್ನದಲ್ಲಿ ಬ್ರಹ್ಮಕಳಶಾಭಿಷೇಕ ನಡೆಯಿತು.
ಉಪದೇವರಿಗೆ ಕಳಶಾಭಿಷೇಕ, ಮಹಾಪೂಜೆ ದೇವರಿಗೆ ಪ್ರತಿಷ್ಠೆ ಬಲಿ, ಮಂಗಳ ಮಂತ್ರಾಕ್ಷತೆ, ಆಶೀರ್ವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮೂರು ದಿನಗಳ ಕಾಲ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ದೇವಾಲಯದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ತಕ್ಕಮುಖ್ಯಸ್ಥರು, ಚುನಾಯಿತ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.








