
ಸೋಮವಾರಪೇಟೆ ಮೇ 2 NEWS DESK : ಆರ್ಥಿಕ ಕ್ಷೇತ್ರದಲ್ಲಿ ಬ್ಯಾಂಕ್ ಗಳ ಸೇವೆ ಗಮನಾರ್ಹವಾಗಿದ್ದು, ಜನಸಾಮಾನ್ಯರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿರಿಕೊಡ್ಲಿ ಮಠಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಮಡಿಕೇರಿ ರಸ್ತೆಗೆ ಸ್ಥಳಾಂತರ ಗೊಂಡಿರುವ ಚೌಡ್ಲು ಕರ್ನಾಟಕ ಬ್ಯಾಂಕ್ ಶಾಖೆಯ ಪ್ರಾಂಗಣ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಬ್ಯಾಂಕ್ ಜನಸ್ನೇಹಿಯಾಗಿ ಜನಸಾಮಾನ್ಯರಿಗೆ ಹತ್ತಿರವಾಗಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.
ವ್ಯಾಪಾರ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸೇವೆ ನೀಡುತ್ತಿದೆ ಆದರೂ ನಿಸ್ವಾರ್ಥವಾಗಿ ದುಡಿಯುವ ಮೂಲಕ ರೈತರಿಗೆ ಮತ್ತಷ್ಟು ಸೇವೆಸಲ್ಲಿಸುವಂತಾಗಬೇಕು ಎಂದರು.
ಬ್ಯಾಂಕ್ ನ ಮೈಸೂರು ವಲಯದ ಸಹಾಯಕ ಮುಖ್ಯ ವ್ಯವಸ್ಥಾಪಕ ಡಾ.ಅರುಣ್ ಮಾತನಾಡಿ, ಕರ್ನಾಟಕ ಬ್ಯಾಂಕ್ ಸ್ಥಾಪನೆ ಗೊಂಡು ನೂರು ವರ್ಷ ಪೂರೈಸಿದೆ. ಈಗ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಕೆಲವೆಡೆಯು ತನ್ನ ಶಾಖೆಯನ್ನು ಹೊಂದಿದ್ದು, ಆದ್ದರಿಂದಲೇ ಭಾರತದ ಕರ್ನಾಟಕ ಬ್ಯಾಂಕ್ ಎಂದು ಹೆಸರುವಾಸಿಯಾಗಿದೆ ಎಂದರು.
ಸೋಮವಾರಪೇಟೆ ಶಾಖೆಯು 1976 ರಲ್ಲಿ ಆರಂಭಗೊಂಡು 16000 ಗ್ರಾಹಕರಿಗೆ ತನ್ನ ಸೇವೆ ನೀಡುತ್ತಾ 143ಕೋಟಿ ವಹಿವಾಟು ನಡೆಸಿದಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕನ ಕ್ಲಸ್ಟರ್ ಮುಖ್ಯಸ್ಥ ಜಯಾನಂದ ದೇವಾಡಿಗ, ಶಾಖಾ ವ್ಯವಸ್ಥಾಪಕ ನಾಗರಾಜ ದೇವಾಡಿಗ ಹಾಜರಿದ್ದರು. ಬ್ಯಾಂಕ್ ನ ಸಿಬ್ಬಂದಿಗಳಾದ ಪ್ರಣೀತಾ ಉಪಾದ್ಯ ಪ್ರಾರ್ಥಿಸಿ, ತನುಶ್ರೀ ಕಾರ್ಯಕ್ರಮ ನಿರೂಪಿಸಿದರು.








