
ಮಡಿಕೇರಿ ಮೇ 2 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭದ ಸಮಾರೋಪ ಸಮಾರಂಭ ಕಾರ್ಯಕ್ರಮವು ಮೇ 3 ರಂದು ನಡೆಯಲಿದೆ.
ಜುಮಾ ನಮಾಝಿನ ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವನ್ನು ಎರುಮಾಡ್ ತಂಙಳ್ ಸಯ್ಯಿದ್ ಇಲ್ಯಾಸ್ ಅಲ್ ಹೈದರೂಪಿ ಎಮ್ಮೆಮಾಡು ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಅಬೂಬಕ್ಕರ್ ಸಖಾಫಿ ಪುದಿಯೋಡಿ ವಹಿಸಲಿದ್ದು, ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಮುಖ್ಯ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸದಸ್ಯ ಉಸ್ಮಾನ್ ಕಂಬೇರ, ಮಾಜಿ ಅಧ್ಯಕ್ಷರಾದ ಉಸ್ಮಾನ್ ಹಾಜಿ ಬೆಲಿಯತ್ಕಾರಂಡ, ಶಾಫಿ ಸಅದಿ ಸೋಮವಾರಪೇಟೆ, ಕರ್ನಾಟಕ ಎಸ್.ವೈ.ಎಸ್ ಅಧ್ಯಕ್ಷ ಹಫೀಳ್ ಸಅದಿ, ಕೊಟ್ಟಮುಡಿ ಹಿದಾಯ ಮರ್ಕಝುಲ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಪಡಿಯಾನಿ ಖತೀಬ್ ಹಂಝ ರಹ್ಮಾನಿ, ಪಳ್ಳರಾಣೆ ಖತೀಬ್ ಝುಬೈರ್ ಮಿಸ್ಬಾಹಿ, ಎಮ್ಮೆಮಾಡು ಗ್ರಾ.ಪಂ ಸದಸ್ಯರಾದ ಮಾಹಿನ್ ಕನ್ನಡಿಯಂಡ, ಪಿ.ಎ.ಅಬ್ದುಲ್ ಗಫೂರ್, ಟಿ.ಕೆ.ಯೂಸುಫ್ ಪಾಲ್ಗೊಳ್ಳಲಿದ್ದಾರೆ. ಅಶ್ರಫ್ ಜೌಹರಿ ಎಮ್ಮೆಮಾಡು ಸ್ವಾಗತಿಸಲಿದ್ದಾರೆ.








