
ಮಡಿಕೇರಿ ಮೇ 2 NEWS DESK : “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ತೀವ್ರ ಪೈಪೋಟಿಯಿಂದ ಕೂಡಿದ್ದ ದಿನದ ದ್ವಿತೀಯ ಪಂದ್ಯದಲ್ಲಿ ಕೊಡವ ವಾರಿಯರ್ಸ್ ತಂಡ 11 ರನ್‍ಗಳ ಅಲ್ಪ ಅಂತರದ ಗೆಲುವನ್ನು ಟೀಂ ಲೀವರೇಜ್ ತಂಡದ ವಿರುದ್ಧ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗೆ ಇಳಿದ ಕೊಡವ ವಾರಿಯರ್ಸ್ ತಂಡ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 112 ರನ್‍ಗಳನ್ನು ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಟೀಂ ಲೀವರೇಜ್ ತಂಡ ನಿಗದಿತ ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 101 ರನ್‍ಗಳನ್ನಷ್ಟೆ ಕಲೆ ಹಾಕಲು ಶಕ್ತವಾಗಿ, ಗೆಲುವಿನ ಸಮೀಪಕ್ಕೆ ಬಂದು ಪರಾಭವಗೊಂಡು ನಿರಾಸೆ ಅಣುಭವಿಸಿತು.
ಕೊಡವ ವಾರಿಯರ್ಸ್ ತಂಡದ ಸಜನ್ ನಂದೀರ ಅವರು ಬಿಗುವಿನ ಬೌಲಿಂಗ್ ಪ್ರದರ್ಶನ ನೀಡಿ, ಕೇವಲ 12 ರನ್‍ಗಳನ್ನಿತ್ತು 3 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಕಾರಣರಾಗುವ ಮೂಲಕ ಪಂದ್ಯ ಪುರುಷೋತ್ತಮರಾಗಿ ಹೊರ ಹೊಮ್ಮಿದರು.










