ಮಡಿಕೇರಿ ಮೇ 12 NEWS DESK : ವಿಶಿಷ್ಠ ಆಚರಣೆಯ ಹಳ್ಳಿಗಟ್ಟು ಬೋಡ್ ನಮ್ಮೆಗೆ ಇಂದು ಮೇ-11ನೇ ಶನಿವಾರ ಮೂಕಳೇರ ಬಲ್ಯಮನೆ ಸಮೀಪದ ಊರಿನ ಅಂಬಲದಲ್ಲಿ ದೇವಕಟ್ಟ್ ಬೀಳುವ ಮೂಲಕ ಹಳ್ಳಿಗಟ್ಟು ಊರಿನಲ್ಲಿ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಯಿತು. ಮೇ 18 ರಂದು ದೇವಕಟ್ಟನ್ನು ಸಡಿಲಿಸುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಅಲ್ಲಿಯತನಕ ಹಳ್ಳಿಗಟ್ಟು ಊರಿನಲ್ಲಿ ಹಸಿರು ಮರಗಿಡಗಳನ್ನು ಕುಡಿಯುವಂತಿಲ್ಲ, ಪ್ರಾಣಿ ವಧೆ ಮಾಡುವಂತಿಲ್ಲ, ಮಾಂಸಕ್ಕಾಗಿ ಬಳಸುವ ಪ್ರಾಣಿಗಳು ಮಾತ್ರವಲ್ಲ, ಯಾವುದೇ ರೀತಿಯ ಹಿಂಸೆ ಮಾಡುವಂತಿಲ್ಲ, ಹಸಿ ಮೊಟ್ಟೆಯನ್ನು ಒಡೆಯುವಂತಿಲ್ಲ, ಪ್ರಾಣಿ ಬೇಟೆ ನಿಷೇಧ, ಗುಂಡಿನ ಶಬ್ದ ಹಾಗೂ ಊರಿನೊಳಗೆ ವಾಲಗದ ಶದ್ದು ನಿಷೇಧ, ರೊಟ್ಟಿ-ದೋಸೆ ಮಾಡುವಂತಿಲ್ಲ, ಸಾಂಬಾರು ಮಾಡುವಾಗ ಅದಕ್ಕೆ ಒಗ್ಗರಣೆ ಹಾಕಬಾರದು ಹೀಗೆ ನಾನಾರೀತಿಯ ಕಟ್ಟುಪಾಡುಗಳನ್ನು ಊರಿನೊಳಗೆ ಪಾಲಿಸಬೇಕು ಎಂಬ ಕಟ್ಟುಪಾಡುಗಳನ್ನು ವಿಧಿಸಲಾಯಿತು. ಈ ಬಗ್ಗೆ ತಿಳಿಯದೆ ತಪ್ಪು ನಡೆದು ಹೋದರೆ ಅದಕ್ಕೆ ಪರಿಹಾರವಾಗಿ ಹಬ್ಬದ ದಿವಸ ತಪ್ಪೊಪ್ಪಿಕೊಂಡು ತಪ್ಪು ಹಣ ಹಾಕಬೇಕು, ತಿಳಿದು ತಿಳಿದು ತಪ್ಪು ಮಾಡುವವರು ದೇವರ ಶಿಕ್ಷೆಗೆ ಒಳಗಾಗುತ್ತಾರೆ ಎಂಬ ನಂಬಿಕೆ. ಶನಿವಾರ ಸಂಜೆ ಊರಿನ ಅಂಬಲದಲ್ಲಿ ಮೂಕಳೇರ ಕಟ್ಟಿ ದೇವಯ್ಯ ದೇವ ಕಟ್ ಹಾಕುವ ಮೂಲಕ ಚಾಲನೆ ನೀಡಿದ್ದರು, ಈ ಸಂದರ್ಭ ಊರಿನ ದೇವಸ್ಥಾನಗಳ ಆಡಳಿತ ಮಂಡಳಿ ಅಧ್ಯಕ್ಷರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ, ಗೌರವ ಕಾರ್ಯದರ್ಶಿ ಮೂಕಳೇರ ಬಿ ರಮೇಶ್, ಸಲಹೆಗಾರರಾದ ಮೂಕಳೇರ ನಂದ ಪೂಣಚ್ಚ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಊರು ತಕ್ಕರಾದ ಚಮ್ಮಟೀರ ಕುಟುಂಬದ ಸದಸ್ಯರು, ಮುಚ್ಚಿಯಯಂಡ, ಮೂಕಳೇರ, ಚೇಂದಿಮಾಡ, ಸಣ್ಣುವಂಡ, ಕೊಳೇರ ಸೇರಿದಂತೆ ವಿವಿಧ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು ಹಬ್ಬವನ್ನು ಮೇ -18 ಹಾಗೂ ಮೇ -19ರಂದು ವಿಜೃಂಭಣೆಯಿಂದ ಆಚರಿಸಲು ತಿರ್ಮಾನಿಸಲಾಯಿತು, ಇದಕ್ಕೆ ಪೂರಕವಾಗಿ ವಿವಿಧ ಚರ್ಚೆ ನಡೆಯಿತು.