ನಾಪೋಕ್ಲು ಮೇ 13 NEWS DESK : ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಮೇ 22 ರಿಂದ 27 ರವರೆಗೆ ಅಂತರ ಗ್ರಾಮ ನಾಲ್ನಾಡ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ನಾಲ್ನಾಡು ಹಾಕಿ ಪಂದ್ಯಾವಳಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ 2000 ದಿಂದ 2012 ರವರೆಗೆ ನಾಲ್ನಾಡ್ ಕಪ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಬಳಿಕ ಕಾರಣಾಂತರಗಳಿಂದ ಸ್ಥಗಿತಗೊಂಡಿತು. 10 ವರ್ಷಗಳ ಬಳಿಕ ಸಾರ್ವಜನಿಕರ ಒತ್ತಾಯದ ಮೇರೆಗೆ ಹೊಸ ಸಮಿತಿಯನ್ನು ರಚಿಸಿ ಪಂದ್ಯಾವಳಿಯನ್ನು ಆರಂಭಿಸಲಾಗಿದೆ ಎಂದರು.
ನಾಲ್ನಾಡು ಕಪ್ ಹಾಕಿ ಪಂದ್ಯಾವಳಿಯ ಮೊತ್ತ ಮೊದಲು ಗ್ರಾಮೀಣ ಮಟ್ಟದಲ್ಲಿ ಯಾವುದೇ ಜಾತಿ ಭೇದಗಲಿಲ್ಲದೆ ಮನೋರಂಜನೆಯ ಜೊತೆಗೆ ಹಾಕಿ ಕ್ರೀಡೆಯ ಹೇಳಿಕೆಗಾಗಿ ಅಯೋಜಿಸಿದ ಹೆಗ್ಗಳಿಕೆ ಈ ಸಮಿತಿಯದಾಗಿದ್ದು ಬಳಿಕ ವಿವಿಧಡೆ ಹಾಕಿ ಪಂದ್ಯಾಟಗಳು ಆರಂಭಗೊಂಡವು.
ಈ ವ್ಯಾಪ್ತಿಯಲ್ಲಿ ಬಹಳಷ್ಟು ಕ್ರೀಡಾ ಪ್ರತಿಭೆಗಳಿದ್ದು ಮನೋರಂಜನೆಯ ಜೊತೆಗೆ ಹಾಕಿ ಕ್ರೀಡೆಯ ಶ್ರೇಯೋಭಿವೃದ್ಧಿಗಾಗಿ ಮುಂದಿನ ವರ್ಷಗಳಲ್ಲಿ ನಿರಂತರವಾಗಿ ಗ್ರಾಮೀಣ ಮಟ್ಟದ ಹಾಕಿ ಪಂದ್ಯಾಟ ಹಾಗೂ ಕೋಚಿಂಗ್ ಕ್ಯಾಂಪ್ ವನ್ನು ಆಯೋಜಿಸಲಾಗುವುದು ಎಂದರು.
ನಾಲ್ಕು ನಾಡು ವ್ಯಾಪ್ತಿಯ ನಾಪೋಕ್ಲು, ಬಲ್ಲಮಾವಟಿ ಹಾಗೂ ಕಕ್ಕಬ್ಬೆ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ 11 ಗ್ರಾಮಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ. ಈಗಾಗಲೇ 14 ತಂಡಗಳು ನೋಂದಾಯಿಸಿವೆ. ಈ ಪಂದ್ಯಾಟಕ್ಕಾಗಿ ಅಪ್ಪಚೆಟ್ಟೋಳ0ಡ ಕುಟುಂಬಸ್ಥರು ಒಂದು ಲಕ್ಷ ರೂಪಾಯಿ ನಗದು ನೀಡಿದ್ದಾರೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ಮಾಳೆಯಂಡ ಬಿನ್ನು ಅವರು ಅವರ ತಾಯಿಯ ಜ್ಞಾಪಕಾರ್ಥ ಪ್ರಥಮ ಬಹುಮಾನ ಹಾಗೂ ಟ್ರೋಫಿ ಬಹುಮಾನವನ್ನು, ರನ್ನರ್ ಪ್ರಶಸ್ತಿಯನ್ನು ಮೂವೆರೆ ಚಂಗಪ್ಪ ಅವರ ಜ್ಞಾಪಕರ್ತ ಮಂದಣ್ಣ ಬಹುಮಾನ ಹಾಗೂ ಟ್ರೋಫಿ ನೀಡಿದ್ದಾರೆ.
ಮಹಿಳೆಯರಿಗೂ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಅಂತರ ಗ್ರಾಮ ಮಟ್ಟದ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಈ ವರ್ಷ ಮೇ 15ರಿಂದ ಪಂದ್ಯಾವಳಿ ಆರಂಭಗೊಳ್ಳಬೇಕಿತ್ತು. ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೇ 22 ರಿಂದ 27ರವರೆಗೆ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದರು.
ಕಾರ್ಯದರ್ಶಿ ಚಂಗೆಟ್ಟಿರ ಸೋಮಣ್ಣ ಮಾತನಾಡಿ, ಈ ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹಗ್ಗ ಜಗ್ಗಾಟ ಸ್ಪರ್ಧೆಯ ಪ್ರಥಮ ಬಹುಮಾನವನ್ನು ದಿ. ಚೀಯoಡಿ ಗಣಪತಿ ಅವರ ಜ್ಞಾಪಕರ್ತ ಅವರ ಮಗ ದಿನೇಶ್ ಹಾಗೂ ದ್ವಿತೀಯ ಬಹುಮಾನವನ್ನು ದಿ.ಮಚ್ಚುರ ಮಂದಣ್ಣ ಅವರ ಜ್ಞಾಪಕಾರ್ಥವಾಗಿ ಅವರ ಮಗ ಯದುಕುಮಾರ್ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಾಕಿ ಸಮಿತಿ ಅಧ್ಯಕ್ಷ ಕರವ೦ಡ ಸುರೇಶ್, ಉಪಾಧ್ಯಕ್ಷ ಮಂಡೀರ ನಂದ ನಂಜಪ್ಪ, ಸಹ ಕಾರ್ಯದರ್ಶಿ ಮಚ್ಚುರ ಯದುಕುಮಾರ್, ಸದಸ್ಯರಾದ ಕೋಟೆರ ಬೋಪಣ್ಣ, ಐರಿರ ವೇಣು ಟಿಮ್ಸ , ಬದಂಚೆಟ್ಟಿರ ದೇವಯ್ಯ, ತೋಲಂಡ ಅರುಣ , ಗ್ರಾಮ ಪಂಚಾಯಿತಿ ಉಪ ಅಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಮಾಲೆಯಂಡ ವಿನು , ಕರವಂಡ ಸಜನ್ , ತೋಳಂಡ ಅರುಣ, ಬೈರುಡ ಮಾಚಯ್ಯ, ಪಂಜೆರಿರ ಹರೀಶ್, ಅಪ್ಪಚೆಟ್ಟೋಳ0ಡ ಅಯ್ಯಪ್ಪ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.