ವಿರಾಜಪೇಟೆ ಮೇ 17 NEWS DESK : ಬ್ರಹ್ಮಲೀನರಾದ ಶ್ರೀ ವಿವೇಕಾನಂದ ಶರಣ ಸ್ವಾಮೀಜಿ ಅವರ 16ನೇ ದಿನದ ಶೋಡಶಿ ಪೂಜೆಯನ್ನು ಸಾಧು-ಸಂತರು ಹಾಗೂ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ವಿರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯ ಕಾವೇರಿ ಆಶ್ರಮದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶ್ರೀ ಪುರುಷೋತ್ತಮನಂದ ನಾಥ ಸ್ವಾಮೀಜಿ, ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಪರ ಹಿತಾನಂದ ಸ್ವಾಮೀಜಿ, ಓಂಕಾರ ಆಶ್ರಮದ ಪೀಠಾಧಿಪತಿಗಳು, ಶ್ರೀ ಆಚಾರ್ಯ ಮಹಾ ಮಂಡಲೇಶ್ವರ, ಡಾ.ಮಧುಸೂದಾನಂದಪುರಿ ಸ್ವಾಮೀಜಿ, ಬೆಂಗಳೂರಿನ ಶ್ರೀ ಕೈಲಾಸ ಆಶ್ರಮದ ಶ್ರೀ ಬುದ್ಧಾನಂದಪುರಿ ಸ್ವಾಮೀಜಿ, ಊಟಿ ಕೈಲಾಸ ಆಶ್ರಮದ ಸುಗುಣಾನಂದ ಪುರಿ ಸ್ವಾಮೀಜಿ, ಬೆಂಗಳೂರಿನ ವಿಶ್ವ ಒಕ್ಕಲಿಗರ ಮಠದ ಶ್ರೀ ರಮಣನಂದನಾಥ ಸ್ವಾಮೀಜಿ, ಬೆಂಗಳೂರಿನ ರಾಮಕೃಷ್ಣ ಕುಟೀರ ಆಶ್ರಮದ ಶಾಂತನಂದ ಸ್ವಾಮೀಜಿ ಮತ್ತು ಭಕ್ತರು ಭಾಗವಹಿಸಿದ್ದರು.
ಇದೇ ವೇಳೆ ಗುರುಗಳ ಸ್ಮರಣೆ ಮೂಲಕ 16ನೇ ದಿನದ ಮಹೇಶ್ವರಿ ಪೂಜೆ ನೆರವೇರಿಸಲಾಯಿತು.










