ಮಡಿಕೇರಿ ಮೇ 28 NEWS DESK : ಮಡಿಕೇರಿ ತಾಲ್ಲೂಕು ಹಿಂದೂ ಮಲಯಾಳಿ ಸಂಘದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೆ.ವಿ.ಧರ್ಮೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್.ದಿನೇಶ್ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಕೆ.ಎಸ್.ರಮೇಶ್, ಖಜಾಂಚಿಯಾಗಿ ಎಂ.ಪಿ.ರವಿ, ಉಪಾಧ್ಯಕ್ಷರುಗಳಾಗಿ ಪಿ.ಟಿ.ಉತ್ತಮನ್, ವಿಜಯ ಕುಮಾರ್, ಟಿ.ವಿ.ಗೋಪಿನಾಥ್, ಕಾರ್ಯದರ್ಶಿಯಾಗಿ ಹೆಚ್.ಪಿ.ಅಶೋಕ್, ಸಹ ಖಜಾಂಚಿಯಾಗಿ ಪಿ.ವಿ.ಸುಬ್ರಮಣಿ, ಸಂಘಟನಾ ಕಾರ್ಯದರ್ಶಿಯಾಗಿ ಟಿ.ಆರ್.ಪ್ರಮೋದ್ ಸಹ ಸಂಘಟನಾ ಕಾರ್ಯದರ್ಶಿಯಾಗಿ ಒ.ಎನ್.ಬಾಬು, ಕಚೇರಿ ಕಾರ್ಯದರ್ಶಿಗಳಾಗಿ ಕೆ.ಕೆ.ಮೋಹನ್, ಪ್ರಚಾರ ಸಮಿತಿ ಸಂಚಾಲಕರಾಗಿ ರವಿ ಅಪ್ಪು ಕುಟ್ಟನ್ ಹಾಗೂ ಪ್ರಚಾರ ಸಮಿತಿ ಸಹ ಸಂಚಾಲಕರಾಗಿ ಪ್ರಕಾಶ್ (ಉಣ್ಣಿ ), ಯುವ ಘಟಕದ ಅಧ್ಯಕ್ಷರಾಗಿ ಆರ್.ಅರವಿಂದ, ಉಪಾಧ್ಯಕ್ಷರಾಗಿ ಕೆ.ಎ.ಹರೀಶ್, ಕಾರ್ಯದರ್ಶಿಯಾಗಿ ಎಸ್.ಸಂದೀಪ್, ಸಹ ಕಾರ್ಯದರ್ಶಿಯಾಗಿ ಮನು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ರದೀಶ್ ಅವರುಗಳು ಸರ್ವಾನುಮತದಿಂದ ಆಯ್ಕೆಯಾದರು.
ನೂತನ ನಿರ್ದೇಶಕರುಗಳಾಗಿ ಚಂದ್ರ, ಎನ್.ಸಿ.ಸುನಿಲ್, ಪ್ರಭಾಕರ್, ಎಂ.ಎಂ.ಸುರೇಶ್, ಪಿ.ಪಿ.ಶ್ರೀಧರ್, ಸಿ.ಕೆ.ಹರೀಶ್, ಗೌರವ ಸಲಹೆಗಾರರಾಗಿ ಟಿ.ಆರ್.ವಾಸುದೇವ, ಟಿ.ಕೆ.ಸುಧೀರ್, ಪಿ.ಟಿ.ಉಣ್ಣಿಕೃಷ್ಣ, ಎಂ.ಅಚ್ಚುತ್ತ ನಾಯರ್, ಆರ್.ಗಿರೀಶ್, ಕೆ.ವಿ.ಸುಬ್ರಮಣಿ, ಎನ್.ವಿ.ಉಣ್ಣಿಕೃಷ್ಣ, ಎಂ.ರದಿಕೇಶನ್ ಅವರುಗಳನ್ನು ಆಯ್ಕೆ ಮಾಡಲಾಯಿತು.
ಈ ಹಿಂದಿನ ನಿರ್ದೇಶಕರುಗಳಾದ ದಿನೇಶ್ ನಾಯರ್, ಸಿ.ಕೆ.ಪ್ರಭಾಕರ್, ಕೆ.ಪಿ.ಶಿವ, ಸುಕುಮಾರ್ ನಾಯರ್, ಎನ್.ರಮೇಶ್, ಕೆ.ಕೆ.ಅನಿಲ್ ಹಾಗೂ ವಿನೋದ್ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ ಎಂದು ಸಂಘದ ಪ್ರಮುಖರು ತಿಳಿಸಿದರು.
::: ಮಹಾಸಭೆ :::
ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ ಸಂಘ ಬೆಳೆದು ಬಂದ ಹಾದಿಯನ್ನು ವಿವರಿಸಿದರು, ಹಳೆಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ನೂತನ ಪದಧಿಕಾರಿಗಳಿಗೆ ಶುಭ ಹಾರೈಸಿದರು.
ಸಂಘದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ.ಕೆ.ಸುಧೀರ್ ಹಾಗೂ ಗೌರವ ಸಲಹೆಗಾರ ಟಿ.ಆರ್.ವಾಸುದೇವ್ ಅವರುಗಳು ಮಾತನಾಡಿ ಸಂಘದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಇವರುಗಳ ಮಾರ್ಗದರ್ಶನದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಸಂಘದ ಸದಸ್ಯರಾದ ಲೇಖಾ ಪ್ರಮೋದ್ ಅವರು ರಚಿಸಿರುವ ಶೀರ್ಷಿಕೆ ಗೀತೆಯನ್ನು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಪೊಲೀಸ್ ಅಧಿಕಾರಿ ಅಚ್ಚುತ್ತನ್ ನಾಯರ್ ಬಿಡುಗಡೆ ಮಾಡಿದರು.
ಶ್ರಾವ್ಯ ಸುಬ್ರಮಣಿ ಪ್ರಾರ್ಥಿಸಿ, ಕೆ.ವಿ.ಧರ್ಮೇಂದ್ರ ಸ್ವಾಗತಿಸಿ, ಹೆಚ್.ಪಿ.ಅಶೋಕ್ ವಂದಿಸಿದರು. ಸಂಘದ ಮೃತ ಸದಸ್ಯರಿಗೆ ಸಭೆಯಲ್ಲಿ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು.