
ನಾಪೋಕ್ಲು ಜೂ.10 NEWS DESK : ಭಾರತೀಯ ಜನತಾ ಪಕ್ಷದ ಮಡಿಕೇರಿ ಗ್ರಾಮಾಂತರ ಮಂಡಲ ಓ ಬಿ ಸಿ ವತಿಯಿಂದ ನಾಪೋಕ್ಲು ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಡಿಕೇರಿ ಗ್ರಾಮಾಂತರ ಮಂಡಲ ಓ ಬಿ ಸಿ ಅಧ್ಯಕ್ಷ ಬಿ ಎಂ ಪ್ರತೀಪ ನೇತೃತ್ವದಲ್ಲಿ ಗಿಡಗಳನ್ನು ನೆಟ್ಟು ಚೋನಕೆರೆ ಸಮೀಪದ ಹಿಂದುಳಿದ ವರ್ಗದ ಕುಟುಂಬಗಳ ಜಮೀನಿನಲ್ಲಿ ವಿವಿಧ ಜಾತಿಯ ನೂರಾರು ಗಿಡಗಳನ್ನು ನೀಡಲಾಯಿತು.
ಈ ಸಂದರ್ಭ ಚನಿಯ, ಸುಬ್ಬಯ್ಯ, ಸುನಿತಾ, ತಿಮ್ಮಯ್ಯ, ಕಲ್ಲೆಂಗಡ ಮೀರು ಸೇರಿದಂತೆ ಇನ್ನಿತರ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.








