
ನಾಪೋಕ್ಲು ಜೂ.11 NEWS DESK : ಮರಂದೋಡ ಶಕ್ತಿ ಕೇಂದ್ರದಿಂದ ಬಿಜೆಪಿ ಕಾರ್ಯಕರ್ತರು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಹಿನ್ನೆಲೆ ಹಾಗೂ ದೇಶದ ಸುಭಿಕ್ಷೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಚಂಡೀರ ಜಗದೀಶ್, ಚಂಡೀರ ಮುದ್ದಪ್ಪ, ಬೂತ್ ಮಟ್ಟದ ಕಾರ್ಯದರ್ಶಿ ಬಾರಿಕೆ ನಂದ ಮತ್ತು ಯುವಮೋರ್ಚಾ ಪದಾಧಿಕಾರಿಗಳಾದ ಚಂಡೀರ ರೋಷನ್, ಮೇರಿಯಂಡ ಆದೇಶ ಬೋಪಯ್ಯ, ಮಾರ್ಚಂಡ ಪಳಂಗಪ್ಪ, ಚಂಡೀರ ವಿಜಯ್, ಚಂಡೀರ ನಂದ, ಮೇರಿಯಂಡ ನೀತಾ ಆದೇಶ್, ಕೊಲೆಯಂಡ ಅಶೋಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ದೇವಾಲಯದ ಮುಖ್ಯ ಅರ್ಚಕ ಕುಶ ಭಟ್, ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ವರದಿ : ದುಗ್ಗಳ ಸದಾನಂದ.








