
ಚೆಟ್ಟಳ್ಳಿ ಜೂ.11 NEWS DESK : ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಪಡೆಯುವ ಮೂಲಕ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದ ಎನ್.ಡಿ.ಎ ಸರಕಾರದ ಆಡಳಿತದ ಚುಕ್ಕಾಣಿ ಹಿಡಿದ ಹಿನ್ನೆಲೆ ಚೆಟ್ಟಳ್ಳಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ವಿಜಯದ ಘೋಷಣೆ ಕೂಗುತ್ತಾ ಪಟ್ಟಣದುದ್ದಕ್ಕೂ ಮೆರವಣಿಗೆ ತೆರಳಿ ಮಾನವ ಸರಪಳಿ ನಿರ್ಮಿಸಿದರು.
ಈ ಸಂದರ್ಭ ಸೋಮವಾರಪೇಟೆ ಮಂಡಳ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿ, ಈ ಬಾರಿಯ ಲೋಕಸಭಾ ಚುನವಣೆಯಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಫಲಕಾರಿಯಾಗಲಿಲ್ಲ. ಪಕ್ಷದ ಕಾರ್ಯಕರ್ತರ ಶ್ರಮದ ಫಲವಾಗಿ ಕೇಂದ್ರದಲ್ಲಿ ಎನ್ ಡಿ ಎ ಸರಕಾರ ಗೆಲುವನ್ನು ಸಾಧಿಸಿದೆ ಎಂದರು.
ಬಿಜೆಪಿ ಹಿರಿಯ ಕಾರ್ಯಕರ್ತ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಈ ಬಾರಿಯ ಬಿಜೆಪಿಯ ಮತ ಚಿದ್ರಗೊಳ್ಳುವ ಮೂಲಕ ಬಿಜೆಪಿ ಪತನಗೊಳ್ಳಲಿದೆ ಎಂದು ಕಾಂಗ್ರೆಸಿಗರು ಭವಿಷ್ಯ ನುಡಿದಿದ್ದರು. ಆದರೆ ಅದು ಹುಸಿಯಾಗಿ ಎನ್ ಡಿಎ ಕೇಂದ್ರದ ಚಿಕ್ಕಾಣಿ ಹಿಡಿದಿದೆ ಎಂದು ಹೇಳಿದರು.
ಹಿರಿಯಕಾರ್ಯಕರ್ತೆ ಮೇರಿ ಅಂಬುದಾಸ್ ಮಾತನಾಡಿ ಬಿಜೆಪಿ ಪಕ್ಷದ ನಾಯಕ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಡುವುದಾಗಿ ಹೇಳಿದವರು ದೇಶ ಬಿಡಲೆಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಕಾರ್ಯಕರ್ತರು ಹಾಜರಿದ್ದರು.








