ಮಡಿಕೇರಿ ಜು.5 NEWS DESK : ದೇಶದಲ್ಲಿ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ದೊಡ್ಡ ಹಗರಣವೇ ನಡೆದಿದ್ದು, ಇದು ಎಷ್ಟು ವರ್ಷಗಳಿಂದ ನಡೆಯುತ್ತಿದೆ ಎನ್ನುವ ಬಗ್ಗೆ ಈಗ ಸಂಶಯ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ, ನೀಟ್ ಅವ್ಯವಹಾರ ಹೊರ ಬೀಳುತ್ತಿದ್ದಂತೆ ಜನ ಆಕ್ರೋಶ ಹೊರ ಹಾಕಿ ಒತ್ತಾಯಿಸಿದ ನಂತರ ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬಗ್ಗೆ ಕೇಂದ್ರ ಯೋಚಿಸುತ್ತಿಲ್ಲ, ಸರ್ಕಾರ ತಪ್ಪಿತಸ್ಥರ ರಕ್ಷಣೆಗೆ ನಿಂತಿದೆ ಎಂದು ಟೀಕಿಸಿದರು.
ವಿದ್ಯಾವಂತ ಯುವಕ, ಯುವತಿಯರ ಭಾವನೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಕೇಂದ್ರದ ವೈಫಲ್ಯದಿಂದಲೇ ನೀಟ್ ಹಗರಣ ನಡೆದಿದೆ. ಸಿಇಟಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ಮೂಲಕ ಕರ್ನಾಟಕ ರಾಜ್ಯ ಮಾದರಿಯಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನೀಟ್ ಪರೀಕ್ಷೆ ನಡೆಸಿದೆ. ಅವ್ಯವಹಾರ ಹೊರ ಬಿದ್ದಿದೆ, ಜನ ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದು ಡಾ.ಶರಣ ಪ್ರಕಾಶ ಪಾಟೀಲ ಆರೋಪಿಸಿದರು.
Breaking News
- *ಸೋಮವಾರಪೇಟೆ : ಆರೋಗ್ಯ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರ*
- *ಸೋಮವಾರಪೇಟೆ : ಇಂದಿರಾ ಕ್ಯಾಂಟೀನ್ ಕಾಮಗಾರಿ ಅಪೂರ್ಣ : ಅಸಮಾಧಾನ*
- *ಡಿಜಿಟಲ್ ಸಾಕ್ಷರತೆ ಮಹಿಳೆಯರ ಬದುಕಿಗೆ ಸಹಕಾರಿಯಾಗಲಿದೆ : ಆನಂದ್ ಪ್ರಕಾಶ್ ಮೀನಾ*
- *ಸೋಮವಾರಪೇಟೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ದಿನಾಚರಣೆ*
- *ಸುಂಟಿಕೊಪ್ಪ : ಅಪ್ರಾಪ್ತರಿಗೆ ವಾಹನ ನೀಡಿದರೆ ಪೋಷಕರಿಗೆ ಶಿಕ್ಷೆ*
- *ಮಡಿಕೇರಿ : ನ.22 ರಂದು ಉದ್ಯೋಗ ಮೇಳ*
- *ನ.20 ರಂದು ಶಾಂತಳ್ಳಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿ : ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ : ಸಮವಸ್ತ್ರ ವಿತರಣೆ*
- *ರಾಷ್ಟ್ರೀಯ ಐಕ್ಯತಾ ದಿನ : ಮಡಿಕೇರಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ*
- *ಮಡಿಕೇರಿಯಲ್ಲಿ ವಿಶ್ವ ಪ್ರತಿಜೀವಕ ನಿರೋಧಕ ಜಾಗೃತಿ ಸಪ್ತಾಹ*