ಮಡಿಕೇರಿ ಜು.9 NEWS DESK : ಅಪಘಾತ ಅಥವಾ ಆಕಸ್ಮಿಕವಾಗಿ ನಡೆಯಲಾಗದ ಸ್ಥಿತಿಯಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಯಾವುದೇ ಧರ್ಮದ ಕಡು ಬಡವರಿಗೆ ಅನುಕೂಲವಾಗುವಂತೆ ಮಾನವೀಯ ಸ್ನೇಹಿತರ ಒಕ್ಕೂಟವು (ಶರತ್ತುಗಳಿಗೆ ಒಳಪಟ್ಟು ಎರವಲು ರೂಪದಲ್ಲಿ) ವೀಲ್ ಚೇರ್ (ಗಾಲಿ ಕುರ್ಚಿ)ಸೌಲಭ್ಯವನ್ನು ಉಚಿತವಾಗಿ ನೀಡಲಿದೆ. ಅರ್ಹ ಫಲಾನುಭವಿಗಳು 9900500814, 9964076698 ಸಂಖ್ಯೆಯನ್ನು ಸಂಪರ್ಕಿಸುವಂತೆ ಒಕ್ಕೂಟ ಕೋರಿದೆ.