ಮಡಿಕೇರಿ ಜು.10 NEWS DESK : ಮದೆ ಮಹೇಶ್ವರ ವಿದ್ಯಾಸಂಸ್ಥೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಹಳೆಯ ವಿದ್ಯಾರ್ಥಿ, ಮಡಿಕೇರಿ ನಗರದ ನಿವಾಸಿ, ಪ್ರಸ್ತುತ ಕುಟುಂಬ ಸಮೇತರಾಗಿ ದುಬೈಯಲ್ಲಿ ನೆಲೆಸಿರುವ ಹ್ಯಾರಿಸ್ ಅವರು ನೀಡಿರುವ ಸಮವಸ್ತ್ರಗಳನ್ನು ಮದೆ ಮಹೇಶ್ವರ ವಿದ್ಯಾಸಂಘದ ಅಧ್ಯಕ್ಷ ಹುದೇರಿ ರಾಜೇಂದ್ರ, ಪ್ರಮುಖರಾದ ಉಣ್ಣಿಕೃಷ್ಣ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.
ವಿದ್ಯಾರ್ಥಿಗಳಿಗೆ ಸಮವಸ್ತ್ರದಂತೆ ಸಮಯ ಪಾಲನೆ, ಶಿಸ್ತು ಮತ್ತು ಓದು ಬರಹದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಮುಂದೆ ತಂದೆ ತಾಯಿಯರಿಗೆ ಮತ್ತು ಊರಿಗೆ ಕೀರ್ತಿಯನ್ನು ತರಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಉಪನ್ಯಾಸಕ ಶ್ರೀನಿವಾಸ್, ಆಂಗ್ಲ ಭಾಷಾ ಉಪನ್ಯಾಸಕ ಹೇಮಂತ್ ಇದ್ದರು. ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಬೆಳ್ಳಯ್ಯ ಸ್ವಾಗತಿಸಿದರು. ಉಪನ್ಯಾಸಕಿ ಯೋಗಿತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಪರಶುರಾಮಪ್ಪ ವಂದಿಸಿದರು.










