ಮಡಿಕೇರಿ ಜು.16 NEWS DESK : 50ನೇ ವರ್ಷದ ಸಂಭ್ರಮದಲ್ಲಿರುವ ನಗರದ ಅಶೋಕಪುರದ ಶ್ರೀ ಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಎಂ.ಜಿ.ಸುನಿಲ್ ಮರು ಆಯ್ಕೆಗೊಂಡಿದ್ದಾರೆ.
ಇತ್ತೀಚಿಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಈಶ್ವರ್, ಕಾರ್ಯದರ್ಶಿಯಾಗಿ ಭರತ್, ಉಪಕಾರ್ಯದರ್ಶಿಯಾಗಿ ಚಂದ್ರಮೌಳಿ, ಖಜಾಂಚಿಯಾಗಿ ಪ್ರಜ್ವಲ್, ಉಪ ಖಜಾಂಚಿಯಾಗಿ ಕಾರ್ತಿಕ್, ಸಂಘಟನಾ ಕಾರ್ಯದರ್ಶಿಗಳಾಗಿ ಕೌಶಿಕ್, ಯತೀಶ್, ಅರ್ಜುನ್, ಅಭಿಲಾಷ್ ಅವರುಗಳನ್ನು ನೇಮಕ ಮಾಡಲಾಯಿತು. 









