ವಿರಾಜಪೇಟೆ ಜು.19 NEWS DESK : ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಟೀಂ ಇಂಟೋಪೀಸ್ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಟ್ರೋಫಿಯನ್ನು ಗೆದ್ದುಕೊಂಡರು.
ಸಬ್ ಜೂನಿಯರ್ ವಿಭಾಗದಲ್ಲಿ ಜೀಯ ತೃತಿಯ ಬಹುಮಾನ, ಜೂನಿಯರ್ ವಿಭಾಗದಲ್ಲಿ ಶ್ರೀದೇವಿ ದ್ವಿತೀಯ ಬಹುಮಾನ, ಜೋಡಿ ನೃತ್ಯ ವಿಭಾಗದಲ್ಲಿ ವಿಮರ್ಶ ಮತ್ತು ತನ್ವಿ ತೃತಿಯ ಬಹುಮಾನ, ಹಿರಿಯ ವಿಭಾಗಗಳಲ್ಲಿ ಯಶಿಕಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.









