ಕುಶಾಲನಗರ ಜು.22 NEWS DESK : ಹುಣ್ಣಿಮೆ ಅಂಗವಾಗಿ ಭಾಗಮಂಡಲ ಸಂಗಮದಿಂದ ಕುಶಾಲನಗರ ಹಾರಂಗಿ ಸಂಗಮ ತನಕ ಏಕಕಾಲದಲ್ಲಿ 14 ಕಡೆ ಜೀವನದಿ ಕಾವೇರಿಗೆ ನಮಾಮಿ ಕಾವೇರಿ ತಂಡದ ಮೂಲಕ ಮಹಾ ಆರತಿ ಬೆಳಗುವ ಕಾರ್ಯಕ್ರಮ ನಡೆಯಿತು.
ಭಾಗಮಂಡಲ, ಚೆಟ್ಟಿಮಾನಿ, ನಾಪೋಕ್ಲು, ಸಿದ್ದಾಪುರ ,ಕರಡಿಗೋಡು ಕಕ್ಕಬೆ, ಕುಶಾಲನಗರ ಮುಳ್ಳುಸೋಗೆ ,ಕೂಡ್ಲೂರು, ಕೊಪ್ಪ, ಮಾದಾಪಟ್ಟಣ, ಚಿಕ್ಕ ಹೊಸೂರು, ಗಿರಗೂರು ಸೇರಿದಂತೆ ಕಾವೇರಿ ನದಿ ತಟದ ಉದ್ದಕ್ಕೂ ತುಂಬಿ ಹರಿಯುತ್ತಿದ್ದ ಕಾವೇರಿಗೆ ಒಟ್ಟು 14 ಕಡೆ ಏಕಕಾಲದಲ್ಲಿ ಆರತಿ ಕಾರ್ಯಕ್ರಮಗಳು ನಡೆದವು.
ಕಳೆದ ಒಂದು ವಾರದಿಂದ ಉಕ್ಕಿ ಹರಿಯುತ್ತಿದ್ದ ಕಾವೇರಿ ಶಾಂತವಾಗಿ ಹರಿದು ನಾಡು ಸುಭಿಕ್ಷ ವಾಗಲಿ ಎಂದು ಬೇಡಿಕೊಳ್ಳಲಾಯಿತು. ನಮಾಮಿ ಕಾವೇರಿ ತಂಡದ ಮುಖ್ಯಸ್ಥರಾದ ವನಿತಾ ಚಂದ್ರಮೋಹನ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ಜರಗಿದವು.
ಕುಶಾಲನಗರದ ಆರತಿ ಕ್ಷೇತ್ರದಲ್ಲಿ ಹುಣ್ಣಿಮೆ ಅಂಗವಾಗಿ 161ನೇ ಮಹಾ ಆರತಿ ಕಾರ್ಯಕ್ರಮ ಜರಗಿತು.