ಮಡಿಕೇರಿ ಜು.25 NEWS DESK : ಹರಿಯಾಣದಲ್ಲಿ ಜು.28ರವರೆಗೆ ನಡೆಯಲಿರುವ 42ನೇ ಅವೃತ್ತಿಯ ರಾಷ್ಟ್ರೀಯ ಸೀನಿಯರ್ ನೆಟ್ ಬಾಲ್ ಚಾಂಪಿಯನ್ ಶಿಪ್‌ಗೆ ಎಂ.ವಿ.ಮುತ್ತಮ್ಮ (ಸಂಜನಾ) ಕರ್ನಾಟಕ ತಂಡದಿಂದ ಸ್ಪರ್ಧಿಸಿದ್ದಾರೆ. ಇವರು ಬೆಂಗಳೂರು ಡಾ.ಎನ್.ಎಸ್.ಎ.ಎಂ.ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ದೈಹಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊನ್ನಂಪೇಟೆ ತಾಲೂಕಿನ ಪೊರಾಡು ಗ್ರಾಮದ ಮೀದೇರಿರ ವಸಂತ ಮತ್ತು ಕವಿತಾ ದಂಪತಿಯ ಪುತ್ರಿ.










